ಪೆರ್ಡೂರು ಟು ಗೋವಾ : ದಾರಿ ಮಧ್ಯೆ ಹಣ್ಣಿನ ಗಿಡಗಳ ನೆಟ್ಟು ಪರಿಸರ ಜಾಗೃತಿಗಾಗಿ ಸೈಕಲ್ ಜಾಥಾ ಮಾಡಿದ ಯುವಕರು
Posted On:
18-04-2021 11:32AM
ಕಾಪು : ಕಾಡಿನ ನಾಶ, ಪ್ಲಾಸ್ಟಿಕ್ ಬಳಕೆಯನ್ನು ತಡೆಯುವ ನಿಟ್ಟಿನಲ್ಲಿ ಪರಿಸರ ಜಾಗೃತಿಗಾಗಿ ಫೆಡಲ್ ಫಾರ್ ಗ್ರೀನ್ ಎಂಬ ಘೋಷವಾಕ್ಯದೊಂದಿಗೆ ಪೆರ್ಡೂರಿಂದ ಗೋವಾದ ಪೊಂಡಕ್ಕೆ ಸುಮಾರು 320 ಕಿಲೋಮೀಟರ್ ಸೈಕಲ್ ಜಾಥಾದ ಮೂಲಕ ಕೃಷ್ಣಾನಂದ ನಾಯಕ್, ವಿಜ್ಞೇಶ್ ನಾಯಕ್, ವಿಜೇತ ನಾಯಕ್ ಆದಿತ್ಯವಾರದಿಂದ ಬುಧವಾರದವರೆಗೆ ಜಾಗೃತಿ ಮೂಡಿಸಿದರು.
ದಾರಿ ಮಧ್ಯೆ ಸಿಗುವ ನರ್ಸರಿಯಲ್ಲಿ ಸುಮಾರು 15 ಬಗೆಯ ಹಣ್ಣುಗಳನ್ನು ನೀಡುವ ಗಿಡಗಳನ್ನು ಅಲ್ಲಲ್ಲಿ ನೆಡುವ ಮೂಲಕ ಸ್ಥಳೀಯರಿಗೂ ಇದರ ಬಗ್ಗೆ ತಿಳಿಸಿ ಅದರ ನಿರ್ವಹಣೆಯ ಜವಾಬ್ದಾರಿಯನ್ನು ವಹಿಸಲಾಯಿತು.
ಕೃಷ್ಣಾನಂದ ನಾಯಕ್ ರೆಗಲಿಕ್ಸ್ ನಲ್ಲಿ ಡಿಸೈನರ್ ಆಗಿ, ವಿಜ್ಞೇಶ್ ನಾಯಕ್ ಕೊಕ್ ಇಂಡಸ್ಟ್ರಿಯಲ್ಲಿ ಅಕೌಂಟೆಂಟ್ ಆಗಿ, ವಿಜೇತ್ ನಾಯಕ್ ಉಡುಪಿ ಪ್ರವಾಸೋದ್ಯಮ ಇಲಾಖೆಯಲ್ಲಿ ಇಂಟನ್೯ಶಿಪ್ ಮಾಡುತ್ತಿದ್ದಾರೆ. ಇವರ ಪರಿಸರ ಜಾಗೃತಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.