ಕಾಪು : ಕೆಲ ದಿನಗಳ ಹಿಂದೆ ಹೆಜಮಾಡಿ ಭಾಗದಲ್ಲಿ ಶಾಂಭವಿ ನದಿಯಲ್ಲಿ ತೇಲುತ್ತಿದ್ದ ಅನಾಥ ಶವವನ್ನು ಕಂಡು ಸಾರ್ವಜನಿಕರು ಪಡುಬಿದ್ರಿ ಪೋಲೀಸರಿಗೆ ಮಾಹಿತಿ ನೀಡಿದ್ದರು. ಪೋಲೀಸರು ಬಂದಾಗ ಶವವು ಮುಲ್ಕಿ ವ್ಯಾಪ್ತಿಯಲ್ಲಿದ್ದ ಪರಿಣಾಮ ಮುಲ್ಕಿ ಠಾಣೆಗೆ ಮಾಹಿತಿಯನ್ನು ನೀಡಿದ್ದರು. ಮುಲ್ಕಿ ಪೋಲೀಸರು ಸ್ಥಳಕ್ಕಾಗಿಮಿಸಿದಾಗ ನೀರಿನ ಹರಿತಕ್ಕೆ ಶವವೇ ಇರಲಿಲ್ಲ.
ದಿನ ಕಳೆದು ಕೊಳೆತು, ಗುರುತು ಸಿಗದ ಸ್ಥಿತಿಯಲ್ಲಿದ್ದ ಆ ಶವವು ಹೆಜಮಾಡಿ ಕಡವಿನ ಬಾಗಿಲು ಬಳಿ ಪತ್ತೆಯಾದ ಸಂದರ್ಭ ಹೆಜಮಾಡಿ ಗ್ರಾಮಪಂಚಾಯತ್, ಪಡುಬಿದ್ರಿ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಳೀಯರ ಸಹಕಾರದಿಂದ ಶವವನ್ನು ಮೇಲಕ್ಕೆತ್ತಲಾಯಿತು. ಶವವನ್ನು ಪಡುಬಿದ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಲಾಗಿದೆ.