ಪಡುಬಿದ್ರಿ : ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ನೇತೃತ್ವದಲ್ಲಿ ಪಡುಬಿದ್ರಿಯಲ್ಲಿ ಗಾಂಧಿ ಭಾರತ ಬೃಹತ್ ಸಮಾವೇಶವನ್ನು ಹಮ್ಮಿಕೊಳ್ಳಲಾಯಿತು.
ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹಮ್ಮದ್ ಮಾತನಾಡಿ, ಕಾಂಗ್ರೆಸ್ ಪಕ್ಷದ ತತ್ವ ಮತ್ತು ಮೌಲ್ಯಗಳನ್ನು ಜನರೊಳಗೆ ತಲುಪಿಸುವ ಅಗತ್ಯವಿದೆ. ಬಿಜೆಪಿ ಸರ್ಕಾರ ಜನರ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಕಾಂಗ್ರೆಸ್ ಮಾತ್ರ ಜನಪರ ಆಡಳಿತ ನೀಡಬಲ್ಲ ಪಕ್ಷವಾಗಿದೆ ಎಂದು ಹೇಳಿದರು.
ಸುಧೀರ್ ಕುಮಾರ್ ಮೊರೋಳಿ ಮಾತನಾಡಿ, ಬಿಜೆಪಿ ಮತ ಕದಿಯುವ ರಾಜಕಾರಣ ನಡೆಸುತ್ತಿದೆ. ಅವರು ಚುನಾವಣಾ ಆಯೋಗದ ನಿಲುವಿನ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ, ಗಾಂಧಿಯವರ ತತ್ವಗಳ ಆಧಾರದ ಮೇಲೆ ದೇಶವನ್ನು ಬಲಪಡಿಸುವ ಹೊಣೆಗಾರಿಕೆ ಕಾಂಗ್ರೆಸ್ ಪಕ್ಷದ ಮೇಲಿದೆ ಎಂದರು.
ಕಾರ್ಯಕ್ರಮದಲ್ಲಿ ಅಬ್ದುಲ್ ಮುನೀರ್ ಜನ್ಸಾಲೆ, ನವೀನ್ ಚಂದ್ರ ಸುವರ್ಣ, ಶರ್ಪುದ್ದೀನ್ ಶೇಖ್, ಮಹಮ್ಮದ್ ನಿಯಾಜ್, ದಿವಾಕರ್ ಶೆಟ್ಟಿ, ನವೀನ್ ಚಂದ್ರ ಜೆ. ಶೆಟ್ಟಿ, ಗೀತಾ ವಾಗ್ಲೆ, ಜೀತೇಂದ್ರ ಫುರ್ಟಾಡೋ, ನವೀನ್ ಚಂದ್ರ ಎನ್. ಶೆಟ್ಟಿ, ಕರುಣಾಕರ್ ಪೂಜಾರಿ, ಯಶ್ವಂತ್ ಪಲಿಮಾರು, ಸುಧೀರ್ ಹೆಜಮಾಡಿ, ಕಿಶೋರ್ ಎರ್ಮಾಳು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈ. ಸುಕುಮಾರ್ ಸ್ವಾಗತಿಸಿದರು. ರಾಜೇಶ್ ಶೇರಿಗಾರ್ ನಿರೂಪಿಸಿ,
ಸಂತೋಷ್ ಕುಮಾರ್ ವಂದಿಸಿದರು.