ಉಡುಪಿ : ಹೋಂ ಡಾಕ್ಟರ್ ಫೌಂಡೇಶನ್
ಉಡುಪಿ ಇದರ ವತಿಯಿಂದ ವಿಶಿಷ್ಟ ಶೈಲಿಯಲ್ಲಿ ಕಾರ್ಮಿಕರ ದಿನವನ್ನು ಮೇ.1ರಂದು ಆಚರಿಸಲಾಯಿತು.
ಲಾಕ್ ಡೌನ್ ನಿಂದ ತೀರಾ ಸಂಕಷ್ಟದಲ್ಲಿದ್ದ ರೋಗಿ ,ಅಸಹಾಯಕರು,ಒಂಟಿ ವೃದ್ದರು ಇರುವ ಅಸಹಾಯಕ ಕಾರ್ಮಿಕರಿಗೆ ನಾವಿದ್ದೇವೆ ನಿಮ್ಮ ಜೊತೆ ಎಂದು ಅಭಯ ನೀಡುವುದರೊಂದಿಗೆ ಸಹಾಯಧನ, ಊಟಕ್ಕೆ ಬೇಕಾದ ಅಕ್ಕಿ ಮತ್ತಿತರ ವಸ್ತುಗಳನ್ನು ನೀಡಲಾಯಿತು. ಅಲ್ಲದೆ ಬಡ ಕಾಮಿ೯ಕ ರೋಗಿಗೆ ವಾಟರ್ ಬೆಡ್ಡ್ ನೀಡಲಾಯಿತು.
ಪೇತ್ರಿ,ಚೇರ್ಕಾಡಿ ,ಕರಂಬಳ್ಳಿದೊಡ್ಡನಗುಡ್ಡೆ ,ಉಡುಪಿ, ಮಣಿಪಾಲದ 10 ಬಡ ಕಾರ್ಮಿಕ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು.
ಈ ಸಂದರ್ಭದಲ್ಲಿ ಹೋಂಡಾಕ್ಟರ್ ತಂಡದ ಸದಸ್ಯರಾದ ಡಾ.ಶಶಿಕಿರಣ್ ಶೆಟ್ಟಿ, ರಾಘವೇಂದ್ರ ಪೂಜಾರಿ, ಬಂಗಾರಪ್ಪ, ಸವಿತಾ ಶೆಟ್ಟಿ, ರಾಘವೇಂದ್ರ ಪ್ರಭು ಕರ್ವಾಲು ,ದಿನಕರ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.