ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ವಲಸೆ ಬಂದಿದ್ದ 20 ಜನರನ್ನು ಊರಿಗೆ ಕಳುಹಿಸಿಕೊಡುವ ಸಲುವಾಗಿ ಆಸೀಫ್ ಆಪತ್ಭಾಂದವರ ಕೆಲಸ ಶ್ಲಾಘನೀಯ - ಕಾಪು ಠಾಣಾಧಿಕಾರಿ ರಾಘವೇಂದ್ರ. ಸಿ

Posted On: 08-05-2021 02:23PM

ಕಾಪು : ಮಹಾರಾಷ್ಟ್ರದಿಂದ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವಠಾರಕ್ಕೆ ಕಳೆದ ಜನತಾ ಕರ್ಫ್ಯೂ ಸಂದರ್ಭದಲ್ಲಿ ವಲಸೆ ಬಂದಿದ್ದವರನ್ನು ಅವರ ಊರಿಗೆ ತಲುಪಿಸಲು ಮೈಮುನಾ ಪೌಂಡೇಶನ್ ರಿ. ಕಾರ್ನಾಡ್ ಮೂಲ್ಕಿ ಇದರ ಸಂಸ್ಥಾಪಕರಾದ ಆಸೀಫ್ ಅಪತ್ಭಾಂದವ ಅವರು ಫೇಸ್ಬುಕ್ ಲೈವ್ ಮುಖಾಂತರ ದಾನಿಗಳ ಸಹಕಾರದಲ್ಲಿ ಕೇವಲ 5 ನಿಮಿಷದಲ್ಲಿ 10,000 ಸಾವಿರ ರೂಪಾಯಿಯನ್ನು ಸಂಗ್ರಹಿಸಿ. ತನ್ನ ಆಂಬುಲೆನ್ಸ್ ಮೂಲಕ ಅವರನ್ನು ಕಾಪುವಿನಿಂದ ಉಡುಪಿ ರೈಲ್ವೆ ನಿಲ್ದಾಣಕ್ಕೆ ತಲುಪಿಸಿ, ಟಿಕೆಟ್ ವ್ಯವಸ್ಥೆ ಮಾಡಿದರು.

ಕಳೆದ ಕೆಲವು ದಿನಗಳಿಂದ ಇವರಿಗೆ ಮದ್ಯಾಹ್ನದ ಊಟದ ವ್ಯವಸ್ಥೆಯನ್ನು ಕಾಪುವಿನ ನೀತಾ ಪ್ರಭುರವರು ಮಾಡುತ್ತಿದ್ದು, ಇಂದು ಕೂಡ ಇವರ ತಂಡ ಅನ್ನ, ಸಾರು ವಿತರಿಸಿದರು, ನಂತರ ಆಸೀಫ್ ಆಪತ್ಭಾಂದವ, ನೀತಾ ಪ್ರಭು, ಯಾದವ್ ಪೂಜಾರಿ ಕಾಪು, ಪ್ರಶಾಂತ್ ಪೂಜಾರಿ ಕಾಪು, ಶಾಹಿಲ್ ಶೈನ್ ಮೂಲ್ಕಿ, ಶಾದ್ ಮಾನಲ್, ಜೀವನ್ ಮಲ್ಲಾರ್ ಮಾಸ್ಕ್ ಹಾಗೂ ಸ್ಯಾನಿಟೈಸರ್ ಗಳನ್ನು ಕೂಡಾ ವಿತರಿಸಿದರು.

ವಲಸೆ ಬಂದಿದ್ದವರನ್ನು ಊರಿಗೆ ತಲುಪಿಸುವ ಈ ಮಹತ್ಕಾರ್ಯಕ್ಕೆ ಕಾಪು ಪುರಸಭೆಯ ಅಧ್ಯಕ್ಷರಾದ ಅನಿಲ್ ಕುಮಾರ್ ₹1000, ಕಾಪು ಪೊಲೀಸ್ ಠಾಣಾಧಿಕಾರಿ ಎಸ್. ಐ ರಾಘವೇಂದ್ರ. ಸಿ ₹2000 ಹಾಗೂ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರಮೇಶ್ ಹೆಗ್ಡೆ ಕಲ್ಯಾ ₹1000, ಹರೀಶ್ ಕಿನ್ನಿಗೋಳಿ ₹5000, ಗೋವರ್ಧನ್ ಸೇರಿಗಾರ್, ಅನಿತ್ ಶೆಟ್ಟಿ ಸಹಕರಿಸಿದರು.