ಕೊರೊನಾ ಸಮಯದಲ್ಲಿ ಊಟವ ನೀಡುವ ವೇದಶ್ರೀ ಕೋಟ್ಯಾನ್
Posted On:
09-05-2021 10:29AM
ಕಾಪು : ಕೊರೋನಾದಿಂದ ಇಡೀ ದೇಶವೇ ಮತ್ತೆ ತತ್ತರಿಸಿ ಹೋಗಿದೆ. ಪರಿಸ್ಥಿತಿ ಮೊದಲಿನಂತೆ ಬರಲು ಎಲ್ಲೆಡೆ ಲಾಕ್ ಡೌನ್ ನಿಯಮ ಜಾರಿಯಲ್ಲಿದೆ. ಎಲ್ಲರು ಮನೆಯಲ್ಲೇ ಇದ್ದು ತಮ್ಮ ತಮ್ಮ ಆರೋಗ್ಯ ಕಾಪಾಡಬೇಕಾಗಿದೆ.
ಇಂತಹ ಸಮಯದಲ್ಲಿ ಮಾನವ ಹಕ್ಕು ರಕ್ಷಣಾ ವೇದಿಕೆ ಇದರ (Dist. incharge Environment development) ಆಗಿರುವ ವೇದಶ್ರೀ ಕೋಟ್ಯಾನ್ ಇವರು ಇಂತಹ ಪರಿಸ್ಥಿತಿಯಲ್ಲೂ ಮಾನವೀಯತೆ ಮೆರೆದಿದ್ದಾರೆ.
ಕೊರೋನಾ ದಲ್ಲಿ ನಾವೆಲ್ಲ ಮನೆಯಲ್ಲೇ ಇದ್ದು ಸುರಕ್ಷಿತವಾಗಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುತ್ತೇವೆ. ಆದರೆ ಪ್ರಾಮಾಣಿಕವಾಗಿ ನಮ್ಮನ್ನು ಕಾಯುತ್ತ ದಿನ ನಿತ್ಯ ಸುಡು ಬಿಸಿಲಿಗೆ ಕೊರೋನಾದ ಮದ್ಯೆ ನಮ್ಮ ಜೀವವನ್ನ ಕಾಪಾಡೋ ಆರಕ್ಷಕ ಸಿಬ್ಬಂದಿ ವರ್ಗಕ್ಕೆ ಅದೆಷ್ಟೇ ಧನ್ಯವಾದ ತಿಳಿಸಿದರು ಅದು ಕೋಟಿ ಪದಗಳಿಗೆ ಸಿಗುವ ಪುಣ್ಯ.
ಇದನ್ನ ಮನದಲ್ಲಿಟ್ಟುಕೊಂಡು ಅವರ ತಂಡ ಪೊಲೀಸ್ ವರ್ಗಕ್ಕೆ ಊಟವನ್ನ ನೀಡೋ ಮುಖೇನ ಮಾನವೀಯತೆ ಮೆರೆದರು ಹಾಗೂ ಮೂಕ ಪ್ರಾಣಿಗಳಾದ ಬೀದಿ ನಾಯಿಗಳಿಗೆ ಆಹಾರವನ್ನ ಹಾಕುವ ಮುಖೇನ ಅವುಗಳ ಹಸಿವನ್ನ ನಿಗಿಸೋ ಮಹಾನ್ ಕಾರ್ಯ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆಹಾರಕ್ಕಾಗಿ ಪರದಾಡುವ ಬದಲು ತನ್ನಿಂದ ಆ ಮೂಕ ಪ್ರಾಣಿಗಳ ಹಸಿವು ನೀಗಲಿ ಎಂಬ ಅವರ ಆಲೋಚನೆ ಅವರಿಗಿದೆ. ಇವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.