ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕೊರೊನಾ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಪು ಶಾಸಕರ ನೇತೃತ್ವದಲ್ಲಿ ಕ್ಷೇತ್ರದ ಪೊಲೀಸ್ ಅಧಿಕಾರಿಗಳ ಜೊತೆ ಸಭೆ

Posted On: 11-05-2021 08:17PM

ಕಾಪು : ಶಾಸಕ ಲಾಲಾಜಿ ಆರ್ ಮೆಂಡನ್ ಇಂದು ಕಾಪು ಶಾಸಕರ ಕಚೇರಿಯಲ್ಲಿ ಕಾಪು ಕ್ಷೇತ್ರದ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದರು. ರಾಜ್ಯದಲ್ಲಿ ಕೋವಿಡ್ 19 ನಿಮ್ಮಿತ್ತ ಲಾಕ್ ಡೌನ್ ಜಾರಿಯಲಿದ್ದು ಈ ಕುರಿತು ಬೆಳಿಗ್ಗೆ 6 ರಿಂದ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಸುವವರಿಗೆ, ಹಾಲು ಹಾಕುವವರಿಗೆ, ಕೃಷಿ ಉತ್ಪನ್ನಗಳ ಮಾರಾಟಗಾರರಿಗೆ, ಮೀನು ಮಾರಾಟಕ್ಕೆ, ಮಲ್ಲಿಗೆ ಮಾರಾಟಕ್ಕೆ, ಪಡಿತರ ಸಾಮಾನುಗಳನ್ನು ತೆಗೆದುಕೊಂಡು ಹೋಗುವವರಿಗೆ 10 ಒಳಗೆ ಕಾರ್ಯನಿರ್ವಹಿಸುವಂತೆ ಸೂಚಿಸಬೇಕಾಗಿ ಹಾಗೂ ಅವರುಗಳಿಗೆ ಯಾವುದೇ ರೀತಿಯ ತೊಂದರೆ ಮಾಡದಂತೆ ಜನ ಗುಂಪುಗೂಡದಂತೆ ನೋಡಿಕೊಳ್ಳುವಂತೆ ಮಾನ್ಯ ಶಾಸಕರು ಸೂಚಿಸಿದರು.

ಕಾಪು ಕ್ಷೇತ್ರದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಕಿಂತರ ಸಂಖ್ಯೆ ಹೆಚ್ಚುತಿದ್ದು ಮರಣ ಪ್ರಮಾಣವು ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ ಮಾನ್ಯ ಶಾಸಕರು ಅನಗತ್ಯವಾಗಿ ಓಡಾಡುವರಿಗೆ ಹಾಗೂ 10 ಗಂಟೆನಂತರ ಅನಿವಾರ್ಯ ಕಾರಣಗಳನ್ನು ಬಿಟ್ಟು ರೋಡಿಗೆ ಬರುವವರಿಗೆ ಕ್ರಮ ಕೈಗೊಳ್ಳಬೇಕಾಗಿ ಸೂಚಿಸಿದರು. ಕಾಪು ಜನತೆಯೂ ಆಡಳಿತ ವರ್ಗದವರೊಂದಿಗೆ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು. ಮದುವೆಗಳಿಗೆ 50 ಜನ ಮೀರದಂತೆ ರಾಜ್ಯ ಸರಕಾರದ ಸೂಚನೆಯಂತೆ ಷರತ್ತಿನ ಮೇಲೆ ಅನುಮತಿ ನೀಡುವಂತೆ ಮಾನ್ಯ ಶಾಸಕರು ಸೂಚಿಸಿದರು.

ಈ ಸಂದರ್ಭದಲ್ಲಿ ಕಾಪು ವೃತ ನಿರೀಕ್ಷಕರು ಪ್ರಕಾಶ್, ಕಾಪು ಎಸ್ಐ ರಾಘವೇಂದ್ರ, ಶಿರ್ವ ಎಸ್ಐ ಶ್ರೀಶೈಲ ಮುರುಗೋಡ್, ಶಿರ್ವ ಕ್ರೈಂ ಎಸ್ಐ ವೇದಾವತಿ, ಪಡುಬಿದ್ರಿ ಎಸ್ ಐ ದಿಲೀಪ್ ಕುಮಾರ್, ಪಡುಬಿದ್ರಿ ಕ್ರೈಂ ಎಸ್. ಐ ಜಯ, ಹಿರಿಯಡ್ಕ ಎಸ್ಐ ಶ್ರೀಮತಿ ಪುಷ್ಪ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.