ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಮೂಳೂರಿನಲ್ಲಿ ಅಕ್ರಮ‌ ಕಸಾಯಿಖಾನೆಗೆ ದಾಳಿ, ಆರೋಪಿಗಳ ಸೆರೆ

Posted On: 12-05-2021 09:16AM

ಕಾಪು : ಮೂಳೂರು ಸುನ್ನಿ ಸೆಂಟರ್ ಸಮೀಪದ ಅಕ್ರಮ‌‌ ಕಸಾಯಿಖಾನೆಗೆ ದಾಳಿ ನಡೆಸಿದ ಪೊಲೀಸರು ದನ ಕರುಗಳನ್ನು ಕದ್ದು ತಂದು ಮಾಂಸ ಮಾಡುತ್ತಿದ್ದ ಆರು ಮಂದಿ ಆರೋಪಿಗಳನ್ನು ಬಂಧಿಸಿ, ನಾಲ್ಕು ಕರುಗಳನ್ನು ರಕ್ಷಿಸಿದ್ದಾರೆ.

ಮುಳೂರು ನಿವಾಸಿ ಮನ್ಸೂರ್ ಅಹಮ್ಮದ್ ಯಾನೆ ಅಹಮ್ಮದ್ ಮನ್ಸೂರ್ ( 32) , ಮಹಮ್ಮದ್ ಅಜರುದ್ಧೀನ್ ( 26), ಮಹಮ್ಮದ್ ಹನೀಫ್ ಯಾನೆ ಆಸ್ಪಕ್ (28 ), ಮಹಮ್ಮದ್ ಇಸ್ಮಾಯಿಲ್ ( 22), ಚಂದ್ರನಗರ ನಿವಾಸಿ ಉಮ್ಮರಬ್ಬ ( 60 ), ಚಿಕ್ಕಮಗಳೂರು ಕೊಪ್ಪ ನಿವಾಸಿ ನವಾಜ್ (25 ) ಎಂಬವರನ್ನು ಬಂಧಿಸಿದ್ದು, ಇವರ ಜೊತೆಗಿದ್ದ ಇಸ್ಮಾಯಿಲ್ , ರಫೀಕ್, ಅಬ್ಬು ಮಹಮ್ಮದ್ ಎಂಬವರು ಪರಾರಿಯಾಗಿದ್ದಾರೆ.

ಬಂಧಿತರಿಂದ ನಾಲ್ಕು ಕರುಗಳು ಸೇರಿದಂತೆ 30 ಕೆ.ಜಿ. ಮಾಂಸ, ಕಸಾಯಿಖಾನೆಯಲ್ಲಿ ಉಪಯೋಗಿಸುತ್ತಿದ್ದ ಸಲಕರಣೆಗಳು ಹಾಗೂ ಪಿಕ್ ಅಪ್ ವಾಹನ ಮತ್ತು ನಾಲ್ಕು ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.