ಪಡುಬಿದ್ರಿ : ಕೋವಿಡ್ - 19 ಎರಡನೇ ಆವೃತ್ತಿ ದುಷ್ಪರಿಣಾಮವನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲ್ಪಟ್ಟ ಲಾಕ್ ಡೌನ್ ನಿಂದಾಗಿ ಜನಸಮಾನ್ಯರ ಪರಿಸ್ಥಿತಿ ಕಂಗಲಾಗಿದ್ದು, ಈ ನಿಟ್ಟಿನಲ್ಲಿ ಒಂದಷ್ಟು ಸೇವಾಯೋಜನೆಗಳನ್ನು ಕೈಗೆತ್ತುವ ಜವಾಬ್ದಾರಿ ಹೊತ್ತ ಪಡುಬಿದ್ರಿ ಭಗವತಿ ಗ್ರೂಪ್ ನೇತೃತ್ವದಲ್ಲಿ ಸಹೃದಯಿ ದಾನಿಗಳಾದ ನಮ್ಮ ಶ್ರೀ ಅನುರಾಧ ಉಚ್ಚಿಲ ಮತ್ತು ಶ್ರೀ ಮಂಜುನಾಥ ಶೆಣೈ ಇವರ ಸಹಕಾರದಿಂದ ಎಲ್ಲೂರು ನಿವಾಸಿ ಹಿರಿಯರಾದ ಶ್ರೀ ನಾರಾಯಣ ದೇವಾಡಿಗ ಮತ್ತು ಶ್ರೀಮತಿ ಬೇಬಿ ದೇವಾಡಿಗ ದಂಪತಿಗಳಿಗೆ ಮನೆಗೆ 4 ತಿಂಗಳ ಅವಧಿಗೆ ಅವಶ್ಯಕವಾದ ಆಹಾರ ಸಮಾಗ್ರಿಗಳನ್ನು ನೀಡಿ ಅವರಿಗೆ ಧೈರ್ಯ ತುಂಬಲಾಯಿತು.
ಈ ಸಂದರ್ಭದಲ್ಲಿ ಭಗವತಿ ಗ್ರೂಪ್ ಸದಸ್ಯರಾದ ಅನುರಾಧ ಉಚ್ಚಿಲ, ವಿಮಲ ದೇವಾಡಿಗ, ಸಂದೇಶ್ ಶೆಟ್ಟಿ ಪಾದೆಬೆಟ್ಟು, ದೀಕ್ಷಿತ್ ಶೆಟ್ಟಿ ಉಲ್ಲೂರ್, ದಿವೀತ್ ಶೆಟ್ಟಿ ಪಾದೆಬೆಟ್ಟು, ರವಿ ಆಚಾರ್ಯ ಪಾದೆಬೆಟ್ಟು, ಸುಕೇನ್ ಪೂಜಾರಿ ಪಾದೆಬೆಟ್ಟು, ಯುವರಾಜ್ ಕುಲಾಲ್ ಉಪಸ್ಥಿತರಿದ್ದರು.