ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಗ್ರಾಮ ಪಂಚಾಯತಿ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಅಗತ್ಯ ವಸ್ತುಗಳ ಹಸ್ತಾಂತರ

Posted On: 15-05-2021 04:30PM

ಕಾಪು : ಕಟಪಾಡಿ ಗ್ರಾಮ ಪಂಚಾಯತಿ ಮತ್ತು ಲಯನ್ಸ್ ಕ್ಲಬ್ ಕಟಪಾಡಿ ವತಿಯಿಂದ ಮೂಡಬೆಟ್ಟು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 6 ಪಲ್ಸ್ ಆಕ್ಸಿಮೀಟರ್ ಮತ್ತು ಬ್ಲೀಚಿಂಗ್ ಪೌಡರ್, ಸ್ಯಾನಿಟೈಸರ್ ಇರುವ 25 ಕಿಟ್ ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿಯವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಎಸ್. ಆಚಾರ್ಯ, ಉಪಾಧ್ಯಕ್ಷ ರಾದ ಅಬುಬಕರ್, ಸದಸ್ಯರಾದ ಅಶೋಕ್ ರಾವ್, ಶ್ರೀಮತಿ ಆಗ್ನೆಸ್ ಡೇಸಾ, ಪ್ರಭಾಕರ ಆಚಾರ್ಯ, ಜೋಸೆಫ್ ಮೊಂತೆರೊ, ಶ್ರೀಮತಿ ಶಾಲಿನಿ ಚಂದ್ರ ಪೂಜಾರಿ, ಶ್ರೀಮತಿ ಪ್ರಭಾ ಬಿ. ಶೆಟ್ಟಿ , ಲಯನ್ಸ್ ಕ್ಲಬ್ ಅಧ್ಯಕ್ಷರಾದ ಪ್ರಭಾಕರ ಪಾಲನ್, ಲಯನ್ ರವೀಂದ್ರ ಆಚಾರ್ಯ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಮಮತಾ ಶೆಟ್ಟಿ , ವಾರ್ಡಿನ ಆಶಾ ಕಾರ್ಯಕರ್ತೆ ಜಯಶ್ರೀ ಆಚಾರ್ಯ, ಆರೋಗ್ಯ ಕೇಂದ್ರದ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶೈನಿಯವರು ಪಲ್ಸ್ ಆಕ್ಸಿಮೀಟರ್ ಹಾಗೂ ಕಿಟ್ ಗಳನ್ನು ಹಸ್ತಾಂತರ ಪಡೆದುಕೊಂಡರು.