ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ಲಾರಿ ಚಾಲಕರಿಗೆ ಉಚಿತ ಆಹಾರ ವಿತರಣೆ
Posted On:
19-05-2021 03:27PM
ಉಡುಪಿ : ಲಾಕ್ ಡೌನ್ ಅವಧಿಯಲ್ಲಿ ಹೊಟೇಲ್ ಗಳು ಮುಚ್ಚಿದ್ದು ಅದರಲ್ಲೂ ಸಣ್ಣ ಪುಟ್ಟ ಹೊಟೇಲ್, ಕ್ಯಾಂಟೀನ್ ನಡೆಸುವವರು ಮನೆಯಲ್ಲಿಯೇ ಕಾಲ ಕಳೆಯುವಂತೆ ಆಗಿರುವುದು ಒಂದೆಡೆಯಾದರೆ ಮತ್ತೊಂದೆಡೆ ಅಗತ್ಯ ವಸ್ತುಗಳನ್ನು ಸಾಗಾಟ ಮಾಡುವ ಲಾರಿ ಚಾಲಕರ ಉಪಹಾರ ಊಟದ ಸಮಯದಲ್ಲಿ ರಸ್ತೆ ಬದಿಯಲ್ಲಿ ಹೊಟೇಲ್ ಇಲ್ಲದ ಕಾರಣ ಸಮಸ್ಯೆ ಎದುರಿಸುತ್ತಿದ್ದಾರೆ.
ಇದನ್ನು ಮನಗಂಡು ಸಣ್ಣ ಹೆಜ್ಜೆಯನ್ನು ಮುಂದಿಟ್ಟ ಸ್ವಚ್ಛ ಭಾರತ್ ಫ್ರೆಂಡ್ಸ್ ವತಿಯಿಂದ ರಾಷ್ಟ್ರೀಯ ಹೆದ್ದಾರಿ 66 ಸಂತೆಕಟ್ಟೆ ಇಲ್ಲಿ ತರಕಾರಿ, ದಿನಸಿ ಸಾಮಗ್ರಿ, ಅಡುಗೆ ಅನಿಲ, ಪೆಟ್ರೋಲಿಯಂ ಉತ್ಪನ್ನಗಳನ್ನು ಸಾಗಾಟ ಮಾಡುವ ಲಾರಿ ಚಾಲಕರಿಗೆ ಬುಧವಾರ ಆಹಾರ ಪೊಟ್ಟಣಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಗಣೇಶ್ ಪ್ರಸಾದ್, ರಾಘವೇಂದ್ರ ಪ್ರಭು ಕರ್ವಾಲು, ರವೀಂದ್ರ ಹೇರೂರು, ಸಂತೋಷ್ ನಾಯ್ಕ್, ಉದಯ ನಾಯ್ಕ್ ಉಪಸ್ಥಿತರಿದ್ದರು.