ಪಾಂಗಾಳ : ಸರಿಯಾದ ಸೂರು, ವಿದ್ಯುತ್ ಸಂಪರ್ಕವಿಲ್ಲದೆ ದಿನ ಕಳೆಯುವ ಹಿರಿ ಜೀವಗಳಿಗೆ ನೆರವಾಗಿ
Posted On:
23-05-2021 04:19PM
ಕಾಪು : ಪಾಂಗಾಳ ಆರ್ಯಾಡಿ ನಿವಾಸಿಗಳಾದ ಗಂಗೆ ಪೂಜಾರ್ತಿ ಮತ್ತು ಗಿರಿಜಾ ಪೂಜಾರ್ತಿ ಮನೆ ತೀವ್ರ ದುಸ್ಥಿತಿಯಲ್ಲಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಮಳೆಗೆ ಬಿದ್ದ ಈ ಮನೆಗೆ ಯಾವುದೇ ರೀತಿಯ ಸೌಲಭ್ಯ ದೊರಕಲಿಲ್ಲ.
ಸರಕಾರದ ಸೌಲಭ್ಯ ಇವರಿಗೆ ಸಿಗುವುದು ಕೇವಲ ಕನಸಾಗಿಯೇ ಉಳಿಯಿತು. ಗಂಡು ದಿಕ್ಕಿಲ್ಲ ಈ ಮನೆಗೆ ಪ್ರಾಯ ಆದ ತಾಯಿ ಜೊತೆ ದಿನ ದೂಡುವುದೇ ಕಷ್ಟವಾಗಿದೆ. ಅಷ್ಟು ಮಾತ್ರವಲ್ಲದೆ ಕಳೆದ 30 ವರ್ಷದಿಂದ ವಿದ್ಯುತ್ ಇಲ್ಲದೆ ಜೀವನ ನಡೆಸುವ ಇವರಿಗೆ ನಡೆಯಲು ದಾರಿ, ಕುಡಿಯಲು ನೀರು ಎಲ್ಲದಕ್ಕೂ ಕಷ್ಟ ಪಡಬೇಕಾಗಿದೆ.
ಈ ಮಹಿಳೆಯರ ಬದುಕು ಬೆಳಕಾಗಲು ಅಧಿಕಾರಿಗಳು, ಜನಪ್ರತಿನಿಧಿಗಳು, ಸಹೃದಯಿಗಳು ಈ ಬಡ ಕುಟುಂಬಕ್ಕೆ ಸೂರು ನಿರ್ಮಿಸಲು ಸಹಕರಿಸಿ, ಮಾನವೀಯತೆ ದೃಷ್ಟಿಯಿಂದ ಸಾಧ್ಯವಾದಷ್ಟು ಸಹಾಯವನ್ನು ಮಾಡಿ ತಾಯಿ ಮಗಳಿಗೆ ಸೂರು ಕಲ್ಪಿಸುವ ಕಾರ್ಯಕ್ಕೆ ಕೈ ಜೋಡಿಸಿ.
ಹೆಸರು : ಗಿರಿಜಾ ಪೂಜಾರ್ತಿ
ಬ್ಯಾಂಕ್ : (ವಿಜಯ ಬ್ಯಾಂಕ್) ಬ್ಯಾಂಕ್ ಆಫ್ ಬರೋಡ
ಬ್ರಾಂಚ್ : ಪಾಂಗಾಳ
ಅಕೌಂಟ್ ನಂಬರ್ : 84350100001837
IFSC code :BARB0VJPANG