ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶ್ವ ಹಿಂದು ಪರಿಷತ್ ಕಾಪು ವತಿಯಿಂದ ಕಾಪು ಭಾಗದ ಆಶಾ ಕಾರ್ಯಕರ್ತರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ

Posted On: 25-05-2021 03:36PM

ಕಾಪು : ವಿಶ್ವ ಹಿಂದು ಪರಿಷತ್ ಕಾಪು ಇದರ ವತಿಯಿಂದ ಇಂದು ಕಾಪು ಭಾಗದ ಎಲ್ಲ ಆಶಾ ಕಾರ್ಯಕರ್ತರಿಗೆ N 95 ಮಾಸ್ಕ್, ಕೈ ಗವಚ ಮತ್ತು ಸ್ಯಾನಿಟೈಸರ್ ನ್ನು ಕಾಪು ಪುರಸಭಾ ಅಧ್ಯಕ್ಷ ಅನಿಲ್ ಕುಮಾರ್ ರವರ ನೇತೃತ್ವದಲ್ಲಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಡಾ. ಸುಬ್ರಾಯ ಕಾಮತ್, ಆರ್ ಎಸ್ ಎಸ್‌ ಮುಖಂಡ ಅಭಿಲಾಷ್ ರಾವ್, ಡಾ. ಚಂದ್ರಕಲಾ, ಸಂದೀಪ್ ಶೆಟ್ಟಿ, ರತ್ನಾಕರ ಶೆಟ್ಟಿ, ಪ್ರವೀಣ್ ಪೂಜಾರಿ, ನಾಗರಾಜ್, ಆಶಾ ಕಾರ್ಯಕರ್ತರು ಉಪಸ್ಥಿತರಿದ್ದರು.