ಕಾಪು : ಸಾಮಾಜಿಕ ಕಾರ್ಯಕರ್ತೆ ಕಾಪುವಿನ ನೀತಾ ಪ್ರಭುರವರ ಜನ್ಮ ದಿನಾಚರಣೆಯ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ 10 ಕೆ.ಜಿ ಅಕ್ಕಿ ಸೇರಿದಂತೆ ದಿನಸಿ ಸಾಮಾಗ್ರಿಗಳನ್ನು ನೀಡಲಾಯಿತು.
ಸುಮಾರು 25 ಸಾವಿರ ಮೌಲ್ಯದ 30 ಕಿಟ್ ಗಳನ್ನು ವಿತರಿಸಲಾಯಿತು.
ಈ ಸಂದರ್ಭ ಜೀವನ್ ಶೆಟ್ಟಿ ಮಲ್ಲಾರ್, ಪ್ರಜ್ವಲ್ ಶೆಟ್ಟಿ ಮಲ್ಲಾರ್, ಪ್ರಶಾಂತ್ ಪೂಜಾರಿ, ಯಾದವ ಪೂಜಾರಿ, ಶ್ರೀಕಾಂತ್ ನಾಯಕ್, ಮಧುಕರ್ ಪೂಜಾರಿ, ಕಾಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಸುಬ್ರಾಯ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.