ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಟಪಾಡಿ : ಯುವಕರು ಜತೆಗೂಡಿ ಮಾಡಿದ ಕಿರುಚಿತ್ರ ಲಂಡನ್ ನ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ

Posted On: 25-05-2021 04:32PM

ಕಾಪು : ಯುವ ಪ್ರತಿಭೆ ವಿಜಿತ್ ಅಂಚನ್ ನಿರ್ದೇಶನ ದ MGM GROUND ಎಂಬ ತುಳು ಕಿರುಚಿತ್ರ ಲಿಫ್ಟ್ ಆಫ್ ಗ್ಲೋಬಲ್ ನೆಟ್ವರ್ಕ್ ಸೆಷನ್ಸ್ 2021 ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆಯಾಗಿದೆ.

ಈ ಕಿರುಚಿತ್ರಕ್ಕೆ ಭರತ್ ಪೂಜಾರಿ ಅವರ ಕಥೆ ಹಾಗೂ ದೀಪಕ್ ಕೋಟ್ಯಾನ್ ರವರ ಕ್ಯಾಮರಾ ವರ್ಕ್ , ಸಂಕಲನ ರೋಹಿತ್ ಆಚಾರ್ಯ , ಎಸ್,ಫ್,ಎಕ್ಸ್ ವರ್ಕ್ ಅಭಿಷೇಕ್ ಆಚಾರ್ಯ ನಿರ್ವಹಿಸಿದ್ದಾರೆ.

ಪ್ರಮುಖ ತಾರಾಗಣದಲ್ಲಿ ವಿಜಿತ್ ಅಂಚನ್ , ಸಚಿನ್ ಆಚಾರ್ಯ , ಸುಷ್ಮಿತಾ ಕೋಟ್ಯಾನ್, ರಕ್ಷಿತ್, ರೋಹಿತ್ ಹಾಗೂ ಗೌತಮ್ , ಶರತ್, ಸುಶಾನ್, ರಂಜಿತ್ , ರಕ್ಷಿತ್ ದೇವಾಡಿಗ, ಸಂದೇಶ್ , ಅನುಷಾ ಮುಂತಾದ ಯುವ ಪ್ರತಿಭೆಗಳು ನಟಿಸಿದ್ದಾರೆ.