ಕರ್ನಾಟಕ ರಾಜ್ಯ ಮುದ್ರಣಕಾರರ ಸಂಘದ ಆನ್ಲೈನ್ ಸಭೆ : ಸರಕಾರದ ಸವಲತ್ತುಗಳನ್ನು ಪಡೆಯಲು ಪ್ರಯತ್ನ
Posted On:
26-05-2021 07:12PM
ಉಡುಪಿ : ಕರ್ನಾಟಕ ರಾಜ್ಯದ ವಿವಿಧ ಜಿಲ್ಲೆಗಳ ಮುದ್ರಣಕಾರರ ಸಂಘದ ಆನ್ಲೈನ್ ಸಭೆಯು ಜರಗಿತು. ಈ ಸಭೆಯಲ್ಲಿ ಸಿ. ಆರ್. ಜನಾರ್ಧನ್‌ರವರು ಮಾತನಾಡಿ ಈ ಸಭೆಗಳನ್ನು ತಿಂಗಳು ತಿಂಗಳು ಮಾಡಬೇಕು ಬರುವ ಎಲ್ಲಾ ಖರ್ಚುಗಳನ್ನು ನಮ್ಮ ರಾಜ್ಯ ಸಂಘಟನೆಯು ಭರಿಸಲಿದೆ ಮತ್ತು ಎಂ.ಎಸ್.ಎಮ್ ಇ.ಯ ಮಾಲಿಕರಿಗೆ ಕೋವಿಡ್-19ನಿಂದ ತುಂಬಾ ಸಂಕಷ್ಟ ಎದುರಾಗಿದೆ. ಕರ್ನಾಟಕದಲ್ಲಿ ಸುಮಾರು 15000ಕ್ಕೂ ಮಿಕ್ಕಿ ಪ್ರಿಂಟಿಂಗ್ ಪ್ರೆಸ್‌ಗಳಿವೆ ಭಾರತದಲ್ಲಿ ಸುಮಾರು 230000 ದವರೆಗೆ ಸಣ್ಣ, ಅತಿ ಸಣ್ಣ, ಮಧ್ಯಮ ವರ್ಗದ ಮುದ್ರಣಾಲಯಗಳಿವೆ. ಸುಮಾರು 2000 ಕೋಟಿಯಷ್ಟು ನಷ್ಟ ಆಗಿರುತ್ತದೆ. ಸರಕಾರ ನಮ್ಮ ಕೈ ಹಿಡಿಯದಿದ್ದರೆ ನಮಗೆ ಉಳಿಗಾಲವಿಲ್ಲ ಎಂಬ ಮಾತನ್ನು ಆಡಿದರು ಮತ್ತು ಎಲ್ಲಾ ಮುದ್ರಕ ಬಾಂಧವರು ಹೆದರುವ ಅಗತ್ಯವಿಲ್ಲ ನಾವೆಲ್ಲ ಒಟ್ಟಾಗಿ ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡಬಹುದು ಎಂಬ ಮಾತನ್ನು ಹೇಳಿದರು.
ಅಶೋಕ್ ಕುಮಾರ್‌ರವರು ಮಾತನಾಡಿ ಎಲ್ಲಾ ಜಿಲ್ಲೆಗಳು ನಮ್ಮ ಮಾತೃ ಸಂಘದಲ್ಲಿ ನೋಂದಾವಣೆಯನ್ನು ಮಾಡಿಕೊಳ್ಳಬೇಕು. ನೋಂದಾವಣೆಗೆ ತಗಲುವ ವೆಚ್ಚ ರೂ.3000 ವನ್ನು ನಮ್ಮ ಮಾತೃ ಸಂಘವೇ ಭರಿಸಲಿದೆ ಎಂಬ ಮಾತನ್ನು ಹೇಳಿದರು. ಈಗಾಗಲೇ ಹಾರೋಹಳ್ಳಿಯಲ್ಲಿ ಪ್ರಿಂಟೆಕ್ ಪಾರ್ಕ್ ಪ್ರಾರಂಭಗೊಂಡಿದ್ದು ಅದರ ಪ್ರಯೋಜನವನ್ನು ಎಲ್ಲಾ ಜಿಲ್ಲೆಗಳ ಸದಸ್ಯರುಗಳು ಪಡೆಯಬೇಕಾಗಿ ಮಾಹಿತಿಯನ್ನು ನೀಡಿದರು. 3 ತಿಂಗಳಿಗೊಮ್ಮೆ ಬೇರೆ ಬೇರೆ ಜಿಲ್ಲೆಗಳಲ್ಲಿ ಸಭೆಯನ್ನು ನಡೆಸುವರೇ ಆ ಸಭೆಯ ಎಲ್ಲಾ ಖರ್ಚನ್ನು ಕರ್ನಾಟಕ ರಾಜ್ಯ ಮುದ್ರಕರ ಸಂಘ ಭರಿಸಲಿದೆ ಹಾಗೂ ಎಲ್ಲಾ ನಮ್ಮ ವೃತ್ತಿ ಬಾಂಧವರಿಗೆ ನಾವು ಸರಕಾರದಿಂದ ಸಿಗುವ ಸವಲತ್ತುಗಳ ಬಗ್ಗೆ ಹೆಚ್ಚಿನ ಪ್ರಯತ್ನವನ್ನು ಮಾಡುತ್ತೇವೆ ಎಂಬ ಭರವಸೆಯನ್ನು ನೀಡಿದರು.
ಹೆಚ್ಚಿನ ಜಿಲ್ಲೆಯ ಅಧ್ಯಕ್ಷರು, ಸದಸ್ಯರುಗಳು ತಮ್ಮ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಜಿ.ಎಸ್.ಟಿ.ಯನ್ನು ಕಟ್ಟುತ್ತಿದ್ದು ನಮಗೆ ಸರಕಾರದಿಂದ ಏನಾದರು ಅನುದಾನ ಸಿಗುವಲ್ಲಿ ಪ್ರಯತ್ನ ಮಾಡಬೇಕು. ಈಗಾಗಲೇ ಹೆಚ್ಚಿನ ಪ್ರಿಂಟಿಂಗ್ ಪ್ರೆಸ್‌ಗಳು ಸಾಪ್ಟ್ವೇರ್ ಲೈಸನ್ಸ್ ಅನ್ನು ಪಡೆದಿದ್ದು ಕೆಲವು ವಿಸಿಟಿಂಗ್ ಕಾರ್ಡ್ ಪ್ರಿಂಟರ್ಸ್ ನಮಗೆ ಬಹಳ ತೊಂದರೆಯಾಗುತ್ತಿದೆ ಎಂಬ ಮಾತನ್ನು ಹೇಳಿದರು. ಅದೇ ರೀತಿ ಕರ್ನಾಟಕ ರಾಜ್ಯ ಮುದ್ರಣ ಸಂಘವು ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಸಹಕಾರವನ್ನು ನೀಡಬೇಕು ಎಂಬ ಮಾತುಗಳು ಬಂತು. ಅದೇ ರೀತಿ ಎಲ್ಲಾ ಜಿಲ್ಲೆಗಳಲ್ಲಿಯೂ ಕೂಡಾ ನಮಗೆ ಬಂದ ಸಂಕಷ್ಟಗಳ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸುವ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಯಿತು.
ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಸಿ. ಆರ್. ಜನಾರ್ಧನ್ (ಮಾಜಿ ಅಧ್ಯಕ್ಷರು, ಆಲ್ ಇಂಡಿಯ ಮಾಸ್ಟರ್ ಪ್ರಿಂಟರ್ಸ್ ಫೆಡರೇಶನ್ ನವದೆಹಲಿ ಮತ್ತು ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಶಿಯೇಶನ್, ಬೆಂಗಳೂರು) ಮತ್ತು ಅಶೋಕ್ ಕುಮಾರ್ (ಅಧ್ಯಕ್ಷರು, ಕರ್ನಾಟಕ ಸ್ಟೇಟ್ ಪ್ರಿಂಟರ್ಸ್ ಅಸೋಶಿಯೇಶನ್, ಬೆಂಗಳೂರು) ಉಪಸ್ಥಿತರಿದ್ದರು. ಕು| ಅಕ್ಷರ ಶೆಟ್ಟಿ ಉಡುಪಿ ಇವರ ಪ್ರಾರ್ಥನೆಯೊಂದಿಗೆ ಸಭೆಯು ಪ್ರಾರಂಭವಾಯಿತು. ಸ್ವಾಗತವನ್ನು ಎಂ. ಮಹೇಶ್ ಕುಮಾರು (ಉಡುಪಿ ಜಿಲ್ಲಾ ಮುದ್ರಣಾಲ್ಹಯಗಳ ಮಾಲಕರ ಸಂಘ, ಉಡುಪಿ) ನೆರವೇರಿಸಿದರು. ಸುಮಾರು 18 ಜಿಲ್ಲೆಗಳ ಅಧ್ಯಕ್ಷರು ಹಾಗೂ ಸದಸ್ಯರು ಭಾಗವಹಿಸಿದ್ದರು.
ಕು| ಅಕ್ಷರ ಶೆಟ್ಟಿ ಉಡುಪಿ ಇವರ ಪ್ರಾರ್ಥನೆಯೊಂದಿಗೆ, ಉಡುಪಿ ಜಿಲ್ಲಾ ಮುದ್ರಣಾಲ್ಹಯಗಳ ಮಾಲಕರ ಸಂಘ, ಉಡುಪಿಯ ಎಂ. ಮಹೇಶ್ ಕುಮಾರ್ ಸ್ವಾಗತಿಸಿದರು.
ಗೌರವ ಸಲಹೆಗಾರರು, ಉಡುಪಿ ಜಿಲ್ಲಾ ಮುದ್ರಣಾಲಯಗಳ ಮಾಲಕರ ಸಂಘ ಉಡುಪಿಯ ಅಶೋಕ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು. ದಾವಣಗೆರೆ ಜಿಲ್ಲಾ ಮುದ್ರಣಕಾರರ ಸಂಘದ ಕಾರ್ಯದರ್ಶಿ ರುದ್ರೇಶ್ ಎಸ್.ವಂದಿಸಿದರು.