ಕಾಪು : ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಲೈಟ್ ಹೌಸ್ ಬಳಿಯ ಕಾಪು ಪಡು ಗರಡಿ, ಬೈರುಗುತ್ತು, ಕೋಟೆ ಕೊಪ್ಪಲ ಮತ್ತು ಸುಬ್ಬಯ್ಯ ತೋಟದಲ್ಲಿರುವ 42 ಕುಟುಂಬಗಳಿಗೆ ಗುರುವಾರ ಬಿರುವೆರ್ ಕಾಪು ಸೇವಾ ಟ್ರಸ್ಟ್ ಇವರ ವತಿಯಿಂದ ಪಡಿತರ ಕಿಟ್ ಗಳನ್ನು ವಿತರಿಸಲಾಯಿತು.
ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಸ್ಥಾಪಕ ಬಾಲಕೃಷ್ಣ ಕೋಟ್ಯಾನ್, ಕಾಪು ಬಿಲ್ಲವರ ಸಹಾಯಕ ಸಂಘದ ಮಾಜಿ ಅಧ್ಯಕ್ಷ ಮಾಧವ ಆರ್. ಪಾಲನ್, ಕಾಪು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಕೇಶ್ ಕುಂಜೂರು, ಬಿರುವೆರ್ ಕಾಪು ಸೇವಾ ಟ್ರಸ್ಟ್ ನ ಟ್ರಸ್ಟಿಗಳಾದ ಕಾರ್ತಿಕ್ ಅಮೀನ್, ಸುಧಾಕರ ಸಾಲ್ಯಾನ್, ಸದಸ್ಯರಾದ ಪ್ರಶಾಂತ್ ಪೂಜಾರಿ, ಸುಜನ್ ಎಲ್. ಸುವರ್ಣ, ನಾಗೇಶ್ ಸುವರ್ಣ, ಅನಿಲ್ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.