ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಎಲ್ಲೂರು : ಚಿಣ್ಣರೇ ಉದ್ಘಾಟಿಸಿದ ಚಿಣ್ಣರ ಕಲರವ

Posted On: 21-11-2021 01:56PM

ಕಾಪು : ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾದಲ್ಲಿ ಸ್ಥಳೀಯ ದುರ್ಗಾ ಮಿತ್ರ ಮಂಡಳಿ , ದುರ್ಗಾ ಸೇವಾ ಸಮಿತಿಯ ಆಶ್ರಯದಲ್ಲಿ ಚಿಣ್ಣರಿಗಾಗಿ ಸಂಯೋಜಿಸಲ್ಪಟ್ಟ 'ಚಿಣ್ಣರ ಕಲರವ' ಕಾರ್ಯಕ್ರಮವನ್ನು ಚಿಣ್ಣರೇ ಉದ್ಘಾಟಿಸಿದರು.

ಮಕ್ಕಳ ದಿನಾಚರಣೆಯ ಪ್ರಯುಕ್ತ ಸಂಯೋಜಿಸಲ್ಪಟ್ಟ ಈ ಕಾರ್ಯಕ್ರಮದಲ್ಲಿ‌ ನಾಲ್ಕು‌ವಿಭಾಗಗಳಲ್ಲಿ‌ ವಿವಿಧ ಸ್ಪರ್ಧೆಗಳನ್ನು‌ ನಡೆಸಲಾಗುತ್ತದೆ. ಅಂಗನವಾಡಿ ,ಎಲ್ ಕೆ ಜಿ ಯಿಂದ ತೊಡಗಿ ಒಂಬತ್ತು - ಹತ್ತನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಸ್ಪರ್ಧಿಸುವ‌ ಅವಕಾಶವಿದೆ. ಪರಿಸರದ ಬೇರೆ ಬೇರೆ ಶಾಲೆಗಳ ಸುಮಾರು ಮುನ್ನೂರು ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐದು ಚಿಣ್ಣರು ದೇವಳದಲ್ಲಿ ಬೆಳಗಿದ ದೀಪಗಳನ್ನು ವೇದಿಕೆಗೆ ತಂದು ಉದ್ಘಾಟನಾ ದೀಪವನ್ನು ಬೆಳಗಿದರು.

ದೇವಳದ ಅರ್ಚಕ ವೇ.ಮೂ. ಚಕ್ರಪಾಣಿ ಉಡುಪ ಆಶೀರ್ವದಿಸಿದರು. ಗೋವಿಂದ ಉಡುಪ, ಕೆ.ಎಲ್ ಕುಂಡಂತಾಯ, ಶ್ರೀವತ್ಸರಾವ್, ಚಂದ್ರಹಾಸ ಆಚಾರ್ಯ,ಯಶವಂತ ಶೆಟ್ಟಿ ,ಲೋಕೇಶ ಶೆಟ್ಟಿ, ರಾಘವೇಂದ್ರ ಶೆಟ್ಟಿ , ಸತೀಶ ಶೆಟ್ಟಿ, ಮುಂತಾದವರು ಉಪಸ್ಥಿತರಿದ್ದರು. ರಾಕೇಶ್ ಕುಂಜೂರು ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.