ಕಾಪು : ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ ಅವರು ನಾರಾಯಣ ಗುರುಗಳ ಕುರಿತು ಬರೆದ ಗುರುದರ್ಶನ ಕನ್ನಡ ಕೃತಿಯನ್ನು ಕೇರಳದ ತಿರುವನಂತಪುರದಲ್ಲಿ ಬಿಡುಗಡೆಗೊಳಿಸಲಾಯಿತು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಸರಕಾರ, ಭಾರತ್ ಭವನ ತಿರುವನಂತಪುರ ಕೇರಳ ಸರಕಾರಗಳ ಆಶ್ರಯದಲ್ಲಿ ಅನಂತಪುರಿ ಗಡಿನಾಡ ಕನ್ನಡ ಸಂಸ್ಕೃತಿ ಉತ್ಸವ 2025ರ ಸಮಾರೋಪ ಸಮಾರಂಭದಲ್ಲಿ ರಾಜ್ಯ ಶಿಕ್ಷಣ ಸಚಿವ ಶಿವನ್ ಕುಟ್ಟಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡುತ್ತಾ ನಾರಾಯಣ ಗುರುಗಳ ತತ್ವಾದರ್ಶಗಳನ್ನು ಮೈಗೂಡಿಸಿಕೊಳ್ಳಬೇಕು. ಅವರ ಜೀವನ ಚರಿತ್ರೆಯನ್ನು ಮುಂದಿನ ತಲೆಮಾರಿಗೆ ನೀಡಿದ ಲೇಖಕರ ಶ್ರಮ ಶ್ಲಾಘನೀಯ ಎಂದರು.
ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಕಾಸರಗೋಡು ಇದರ ಸಂಸ್ಥಾಪಕ ಎಸ್. ಪ್ರದೀಪ್ ಕುಮಾರ್ ಕಲ್ಕೂರ, ಲೇಖಕ ಶಿವಾನಂದ ಕೋಟ್ಯಾನ್ ಕಟಪಾಡಿ,ಶ್ರೀಧರ ಶೆಟ್ಟಿ ಮುಟ್ಟಮ್ ತಿರುವನಂತಪುರ ಕನ್ನಡ ಸಂಘದ ಅಧ್ಯಕ್ಷೆ ಭಾನುಮತಿ ಶೆಟ್ಟಿ, ಧಾರ್ಮಿಕ ಮುಂದಾಳು ಅರಿಬೈಲು ಗೋಪಾಲ ಶೆಟ್ಟಿ ಕಾಸರಗೋಡು, ಸಮಾಜಸೇವಕ ಮಂಜುನಾಥ ಆಳ್ವ ಮಡ್ವ, ನಿವೃತ್ತ ಅಂಡರ್ ಸೆಕ್ರಟೆರಿ ಕೇರಳ ಲೋಕಸೇವಾ ಆಯೋಗದ ಗಣೇಶ್ ಪ್ರಸಾದ್ ಪಾಣೂರು, ಅನಂತಪುರಿ ಗಡಿನಾಡ ಸಾಂಸ್ಕೃತಿಕ ಉತ್ಸವದ ಪ್ರಧಾನ ಸಂಚಾಲಕ ಎ.ಆರ್. ಸುಬ್ಬಯ್ಯ ಕಟ್ಟೆ, ತಿರುವನಂತಪುರ ತೆಲುಗು ಸಾಂಸ್ಕೃತಿಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯ ಕೆ ಜಿ ಕೆ ಕಿಶೋರ್, ಸಂಘಟಕ ಸರಿನ್ ಮೊಹಮ್ಮದ್,ಡಾ ಮಲ್ಲಿಕಾರ್ಜುನ ನಾಸಿ ಏರ್ನಾಕುಲಂ, ಪ್ರೊಫೆಸರ್ ವೀರಣ್ಣ ತುಪ್ಪದ ಬೀದರ್ ಪ್ರೋ.ಶ್ರೀನಾಥ್, ವಕೀಲ ಎಂ.ಎಸ್. ಥೋಮಸ್ ಡಿ.ಸೋಜ, ಝಡ್ ಎ. ಕಯ್ಯಾರು, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಪಾಲ್ಗೊಂಡಿದ್ದರು.
ಲೇಖಕ ಪತ್ರಕರ್ತ ರವಿ ನಾಯ್ಕಾಪು ನಿರೂಪಣೆಗೈದರು. ಕಾಸರಗೋಡು ಗ.ಸಾ.ಸಾ. ಅಕಾಡೆಮಿಯ ಕಾರ್ಯದರ್ಶಿ ಅಖಿಲೇಶ್ ನಗುಮುಗಂ ಸ್ವಾಗತಿಸಿ, ಅಧ್ಯಕ್ಷ ಎನ್.ಚನಿಯಪ್ಪ ನಾಯ್ಕ ವಂದಿಸಿದರು.