ಲಸಿಕಾ ಮಿತ್ರರ ಮೂಲಕ ಜಿಲ್ಲೆಯಲ್ಲಿ ಶೇ.100 ಲಸಿಕೆ ನೀಡುವ ಗುರಿ
Posted On:
21-11-2021 06:29PM
ಉಡುಪಿ : ಜಿಲ್ಲೆಯಲ್ಲಿ 18ರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡಲು 9,99,000 ಗುರಿ ನಿಗಧಿಪಡಿಸಿದ್ದು, ಇದುವರೆಗೆ 1ನೇ ಡೋಸ್ ಲಸಿಕೆಯನ್ನು 9,24,639 (92.56%) ಜನರಿಗೆ ನೀಡಲಾಗಿದೆ ಹಾಗೂ ಇವರಲ್ಲಿ ಈಗಾಗಲೇ 6,11,569 (61.22%) ಜನರಿಗೆ ಎರಡನೇ ಡೋಸ್ ಲಸಿಕೆಯನ್ನು ನೀಡಲಾಗಿದೆ.
ಕೋವಿಡ್ ಸಂಭಾವ್ಯ 3ನೇ ಅಲೆಯಲ್ಲಿ ಮಕ್ಕಳಿಗೆ ಹೆಚ್ಚು ಪರಿಣಾಮ ಉಂಟಾಗುವ ಸಾಧ್ಯತೆ ಇದ್ದು, 18 ರ್ಷ ಮೇಲ್ಪಟ್ಟವರಲ್ಲಿ ಲಸಿಕೆ ಪಡೆಯದವರಿಗೆ ಕೋವಿಡ್ ಕಾಯಿಲೆ ಬರುವ ಸಾಧ್ಯತೆ ಹೆಚ್ಚಾಗಿದ್ದು ಎರಡನ್ನೂ ತಡೆಗಟ್ಟಲು 18 ರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡುವ ಉದ್ದೇಶದಿಂದ ಲಸಿಕಾ ಮಿತ್ರರು ನವೆಂಬರ್ 22 ರಿಂದ 30 ರವರಗೆ ಜಿಲ್ಲೆಯ ಪ್ರತೀ ಮನೆಗಳನ್ನು ಭೇಟಿ ನೀಡುವ ಮೂಲಕ ,ಲಸಿಕೆ ಪಡೆದಿರುವ ಮತ್ತು ಪಡೆಯದಿರುವವರ ಬಗ್ಗೆ ಪರಿಶೀಲನೆ ನಡೆಸಲಿದ್ದು,ಲಸಿಕೆ ಪಡೆಯದವರಿಗೆ ಲಸಿಕೆ ನೀಡುವುದರ ಮೂಲಕ ಶೇ.100 ಗುರಿ ಸಾಧಿಸಲು ಯೋಜನೆ ರೂಪಿಸಿದೆ.
ಜಿಲ್ಲೆಯ ಮತದಾರರ ಪಟ್ಟಿಯನ್ನು ಬಳಸಿ ಪ್ರತಿ ಮನೆ ಸಮೀಕ್ಷೆ ಮಾಡಿ ಮನೆಯಲ್ಲಿರುವ 18 ರ್ಷ ಮೇಲ್ಪಟ್ಟವರಲ್ಲಿ 2 ಡೋಸ್ ಲಸಿಕೆ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳುವುದು. ವೋಟರ್ ಲಿಸ್ಟ್ನಲ್ಲಿರುವ ಪ್ರತಿ ವ್ಯಕ್ತಿಯ ಹೆಸರಿನ ಪಕ್ಕದಲ್ಲಿ ಸೂಕ್ತ ಗುರುತು ಹಾಕಿಕೊಳ್ಳಲಾಗುವುದು. ಲಸಿಕೆ ಪಡೆಯಲು ನಿರಾಕರಣೆ ಇದ್ದಲ್ಲಿ ಅವರ ಹೆಸರಿನ ಮುಂದೆ ನಿರಾಕರಣೆ ನಮೂದಿಸಿ, ಮೊಬೈಲ್ ಸಂಖ್ಯೆ ದಾಖಲಿಸಲಾಗುವುದು. ಮತದಾರರ ಪಟ್ಟಿಯಲ್ಲಿರುವವರು ಮರಣ ಹೊಂದಿದ್ದಲ್ಲಿ ಹೆಸರಿನ ಮುಂದೆ ಮರಣ ಎಂದು ಹಾಗೂ ಮತದಾರ ಪಟ್ಟಿಯಲ್ಲಿರುವವರು ಹೊರ ಜಿಲ್ಲೆ/ರಾಜ್ಯದಲ್ಲಿ ನೆಲೆಸಿದ್ದರೆ ಅವರ ಹೆಸರಿನ ಮುಂದೆ ಹೊರಜಿಲ್ಲೆ ನಮೂದಿಸಿ ಮೊಬೈಲ್ ಸಂಖ್ಯೆ ದಾಖಲಿಸಲಾಗುವುದು. ಮನೆಯಲ್ಲಿರುವವರಲ್ಲಿ 18 ರ್ಷ ಮೇಲ್ಪಟ್ಟವರ ಹೆಸರು ವೋಟರ್ ಲಿಸ್ಟ್ನಲ್ಲಿ ಇಲ್ಲದಿದ್ದಲ್ಲಿ ಕುಟುಂಬದ ಸದಸ್ಯರ ಪಕ್ಕದಲ್ಲಿ ಹೊಸದಾಗಿ ಹೆಸರು ನಮೂದಿಸಿ ಲಸಿಕೆ ಪಡೆದ ಬಗ್ಗೆ ದಾಖಲಿಸಲಾಗುವುದು. ಪ್ರತಿ ಪಂಚಾಯತ್ನಲ್ಲಿ ವಾರದಲ್ಲಿ 1 ದಿನ ಬೆಳಿಗ್ಗೆ 7 ರಿಂದ 2 ಗಂಟೆಯವರೆಗೆ ಮತ್ತು ಇನ್ನೊಂದು ವಾರದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಲಸಿಕಾ ಶಿಬಿರ ಏರ್ಪಡಿಸಿ ಕೂಲಿ ಕಾರ್ಮಿಕರು ಲಸಿಕೆ ಪಡೆಯಲು ಯೋಜನೆ ರೂಪಿಸಲಾಗಿದೆ.
ಈ ಕರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಬಿ.ಎಲ್.ಒ ರವರನ್ನು ಒಳಗೊಂಡ ತಂಡಗಳನ್ನು ರಚಿಸಿಕೊಂಡು ಪಂಚಾಯತ್ ವ್ಯಾಪ್ತಿಯಲ್ಲಿರುವ ಎಲ್ಲಾ ಮನೆಗಳಿಗೆ ಭೇಟಿ ನೀಡಿ ಪ್ರಥಮ ಡೋಸ್ ಕೋವಿಡ್ ಲಸಿಕೆ ಪಡೆಯದವರನ್ನು ಮತ್ತು ಪ್ರಥಮ ಡೋಸ್ ಕೋವಿಶೀಲ್ಡ್ ಲಸಿಕೆ ಪಡೆದು 84 ದಿನ ದಾಟಿದವರಲ್ಲಿ ಹಾಗೂ ಪ್ರಥಮ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪಡೆದು 28 ದಿನ ದಾಟಿದವರಲ್ಲಿ 2ನೇ ಡೋಸ್ ಪಡೆಯದವರನ್ನು ಪತ್ತೆ ಹಚ್ಚಲಾಗುವುದು. ಪಂಚಾಯತ್ ವ್ಯಾಪ್ತಿಯಲ್ಲಿ ಲಸಿಕಾ ಶಿಬಿರ ರ್ಪಡಿಸಿ ಲಸಿಕೆ ಪಡೆಯದವರನ್ನು ಮೊಬಿಲೈಸ್ ಮಾಡಿ 100% ಲಸಿಕಾ ಸಾಧನೆ ಮಾಡಲು ಗ್ರಾಮ ಪಂಚಾಯತ್ ಮಟ್ಟದಲ್ಲಿ ಮೇಲ್ವಿಚಾರಣೆ ಮಾಡಲು ತಾಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಲಸಿಕೆ ಪಡೆಯಲು ನಿರಾಕರಣೆ ಜಾಸ್ತಿ ಇರುವ ಪ್ರದೇಶಗಳಿಗೆ ಭೇಟಿ ನೀಡಿ ಜನರನ್ನು ಮನವೊಲಿಸಿ ಲಸಿಕೆ ಪಡೆಯುವಂತೆ ಮಾಡಲಾಗುವುದು.
80 ರ್ಷ ಮೇಲ್ಪಟ್ಟವರಲ್ಲಿ ಲಸಿಕಾ ಕೇಂದ್ರಕ್ಕೆ ಬರಲು ಅಶಕ್ತರಾದವರಿಗೆ ಮನೆಗೆ ಭೇಟಿ ನೀಡಿ ಲಸಿಕೆ ನೀಡಲು ಹಾಗೂ ರ್ಭಿಣಿಯರು ಮತ್ತು ಬಾಣಂತಿಯರು ಕೋವಿಡ್ ಲಸಿಕೆ ಪಡೆಯುವಂತೆ ಪ್ರಸೂತಿ ತಜ್ಞರ ಮೂಲಕ ಅರಿವು ಮೂಡಿಸಲಾಗುವುದು. ಲಸಿಕಾ ಕೇಂದ್ರದಲ್ಲಿ ಲಸಿಕೆ ಪಡೆಯುವವರಿಗೆ ಕೋವಿಡ್ ಸ್ವಾಬ್ ಪರೀಕ್ಷೆ ಮಾಡದಂತೆ ಈಗಾಗಲೇ ಸೂಚಿಸಲಾಗಿದೆ
ಜಿಲ್ಲೆಯಲ್ಲಿ ಲಸಿಕಾ ಮಿತ್ರರ ಮೂಲಕ ಪ್ರತೀ ಮನೆ ಭೇಟಿ ಕಾರ್ಯಕ್ರಮದ ಯಶಸ್ಸಿಗಾಗಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ಪ್ರತೀ ದಿನ ಸಾಧಿಸಬೇಕಾದ ಪ್ರಗತಿಯ ಬಗ್ಗೆ ಗುರಿ ನಿಗಧಿಪಡಿಸಲಾಗಿದೆ. ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತೀ ದಿನ ಮೇಲ್ವಿಚಾರಣೆ ಮಾಡಲು ಪ್ರತೀ ತಾಲೂಕುವಾರು ಅಧಿಕಾರಿಗಳನ್ನು ನಿಯೋಜಿಸಲಾಗಿದೆ, ಸರ್ವಜನಿಕರು ಮನೆ ಭೇಟಿಗೆ ಆಗಮಿಸುವ ಲಸಿಕಾ ಮಿತ್ರರಿಗೆ ಸಂಪರ್ಣ ಸಹಕಾರ ನೀಡಬೇಕು. ಕೋವಿಡ್ ಲಸಿಕೆ ಪಡೆಯುವ ಕುರಿತು ಯಾವುದೇ ಸಂದೇಹಗಳಿದ್ದಲ್ಲಿ ಸಮೀಪದ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳನ್ನು ಸಂರ್ಕಿಸಬಹುದಾಗಿದ್ದು, ಲಸಿಕೆ ಪಡೆಯುವುದರಿಂದ ಯಾವುದೇ ಸಮಸ್ಯೆಗಳಿರುವುದಿಲ್ಲ. ಜಿಲ್ಲೆಯ ಪ್ರತಿಯೊಬ್ಬರೂ 2 ಡೋಸ್ ಕೋವಿಡ್ ಲಸಿಕೆ ಪಡೆಯುವ ಮೂಲಕ ಜಿಲ್ಲೆಯಲ್ಲಿ 100% ಲಸಿಕಾಕರಣದ ಗುರಿ ಸಾಧಿಸಿ, ಜಿಲ್ಲೆಯನ್ನು ಕೋವಿಡ್ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಹಾಗೂ ಇಡೀ ರಾಜ್ಯಕ್ಕೆ ಮಾದರಿ ಜಿಲ್ಲೆಯನ್ನಾಗಿ ಮಾಡಲು ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕರ್ಮಾರಾವ್ ಎಂ. ತಿಳಿಸಿದರು.