ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಪತ್ರಕರ್ತ ಚಂದ್ರಶೇಖರ ಪಾಲೆತ್ತಾಡಿಗೆ ಅಭಿನಂದನೆ
Posted On:
24-11-2021 07:00PM
ಮಂಗಳೂರು: ನವಂಬರ್ 1ರಂದು ಬೆಂಗಳೂರಿನಲ್ಲಿ ಜರಗಿದ ರಾಜ್ಯೋತ್ಸವ ಸಮಾರಂಭದಲ್ಲಿ 2021 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಹೊರನಾಡ ಕನ್ನಡಿಗ, ಮುಂಬಯಿ 'ಕರ್ನಾಟಕ ಮಲ್ಲ' ಕನ್ನಡ ದೈನಿಕದ ಪ್ರದಾನ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಅವರನ್ನು ಮಂಗಳೂರಿನ ಕುಲಶೇಖರ ವೀರನಾರಾಯಣ ದೇವಸ್ಥಾನದಲ್ಲಿ ಅಭಿನಂದಿಸಲಾಯಿತು.
ಅಭಿನಂದನೆಯನ್ನು ಸ್ವೀಕರಿಸಿದ ಪಾಲೆತ್ತಾಡಿ ಮಾತನಾಡುತ್ತಾ ಕುಲಾಲ ಸಮಾಜ ನನ್ನ ಮೇಲೆ ಇಟ್ಟಿರುವ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ. ಕ್ಷೇತ್ರದಲ್ಲಿ ಕುಲಾಲ ಸಮಾಜದ ಧಾರ್ಮಿಕ ಚಿಂತನೆಗಳು ಎದ್ದು ಕಾಣುತ್ತಿದೆ.
ಶ್ರದ್ಧೆ. ಭಕ್ತಿಯಿಂದ ಯಿಂದ ಜೀರ್ಣೋದ್ಧಾರದ ಸೇವೆಯನ್ನು ಮಾಡಿದಾಗ ದಾನಿಗಳು, ಭಕ್ತರು ದೇವರ ರೂಪದಲ್ಲಿ ಬರುತ್ತಾರೆ ಆ ಮೂಲಕ ಸಹಕಾರ ನೀಡುತ್ತಾರೆ ಎಂದು ತಿಳಿಸಿದ ಪಾಲೆತ್ತಾಡಿ ಯವರು ನಾನು ಪ್ರಶಸ್ತಿಗಾಗಿ ಹಂಬಲಿಸಿ ಕೊಂಡವನಲ್ಲ ನನ್ನ ಸೇವಾಕಾರ್ಯವನ್ನು ಮಾಡುತ್ತಾ ಬಂದಿದ್ದೇನೆ ಅದನ್ನು ಸರಕಾರ ಗುರುತಿಸಿಕೊಂಡಿದೆ. ನಾವು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಸೇವಾಕಾರ್ಯಗಳನ್ನು ಮಾಡಿದಾಗ ನಮ್ಮನ್ನು ಪ್ರಶಸ್ತಿಗಳು ಸನ್ಮಾನಗಳು ಹುಡುಕಿಕೊಂಡು ಬರುತ್ತದೆ. ಎಂದು ಹೇಳಿದರು.
ಕ್ಷೇತ್ರದ ಮಾಜಿ ಆಡಳಿತ ಮೊಕ್ತೇಸರ ಬಿ ಸುರೇಶ್ ಕುಲಾಲ್ ಮಂಗಳಾದೇವಿಯವರು ಅಭಿನಂದನಾ ನುಡಿಗಳನ್ನಾಡಿದರು. ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಎಂ.ಪಿ. ಬಂಗೇರ ಕ್ಷೇತ್ರದ ಸಮಗ್ರ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ್, ದೇವಸ್ಥಾನದ ಆಡಳಿತ ಮೊಕ್ತೇಸರ
ಪುರುಷೋತ್ತಮ್ ಕುಲಾಲ್ ಕಲ್ಬಾವಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು
ಎ. ದಾಮೋದರ, ಶ್ರೀ ವೀರನಾರಾಯಣ ಸೇವಾ ಟ್ರಸ್ಟ್ ಕಾರ್ಯಧ್ಯಕ್ಷರು ಬಿ ಪ್ರೇಮಾನಂದ ಕುಲಾಲ್.
ಸೇವಾ ಸಮಿತಿ ಅಧ್ಯಕ್ಷರು ಸುಂದರ ಕುಲಾಲ್ ಶಕ್ತಿನಗರ, ಟ್ರಸ್ಟಿ ಗಿರಿಧರ್ ಜೆ ಮೂಲ್ಯ. ದೇವಸ್ಥಾನದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಮನೋಜ, ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಮೀಳಾ ಸಾಲ್ಯಾನ್, ಪುರುಷೋತ್ತಮ ಕುಲಾಲ ಬಿಜೈ, ದಯಾನಂದ ಅಡ್ಯಾರ್, ಕಿರನ್ ಅಟ್ಲೂರು, ಧನುಷ್ ಕುಲಾಲ್ ಮತ್ತು ಬೊಕ್ಕಪಟ್ನ ಬೋಳೂರಿನ ಶ್ರೀ ರಾಮಾಂಜನೇಯ ವ್ಯಾಯಾಮಶಾಲೆ ಸಂಸ್ಥಾಪಕ ಶಿಕ್ಷಕ ಮಾಸ್ಟರ್ ಬಿ ಸೀತಾರಾಮ್ ಕುಲಾಲ್, ಕಾರ್ಯದರ್ಶಿ ಬಿ ನಾಗೇಶ್ ಕುಲಾಲ್ ಮತ್ತಿತರ ಕುಲಾಲ ಸಮಾಜದ ಮುಖಂಡರು ಕ್ಷೇತ್ರದ ಭಕ್ತರು ಪಾಲ್ಗೊಂಡಿದ್ದರು.