ಕಟಪಾಡಿ : ಶ್ರೀ ನಾರಾಯಣಗುರು ಪ್ರೌಢಶಾಲೆ ಪಡುಬೆಳ್ಳೆ ಇಲ್ಲಿ ಲಯನ್ಸ್ ಕ್ಲಬ್ ಬಂಟಕಲ್ ಬಿಸಿರೋಡ್ ಮತ್ತು ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಇವರ ಸಂಯುಕ್ತಾಶ್ರಯದಲ್ಲಿ ಸೈಬರ್ ಜಾಗೃತ ದಿವಸ್ ಕಾರ್ಯಕ್ರಮ ಜರಗಿತು.
ಶಿರ್ವ ಠಾಣಾಧಿಕಾರಿ ಶ್ರೀಶೈಲ ಮುಂಡಗೋಡ ಇವರು ಆಗಮಿಸಿ ಸೈಬರ್ ಅಪರಾಧಗಳ ಬಗ್ಗೆ ಜಾಗ್ರತೆ ಮತ್ತು ಅಂತರ್ಜಾಲದ ಬಳಕೆಯ ಬಗ್ಗೆ ವಹಿಸಬೇಕಾದ ಎಚ್ಚರಿಕೆಯ ಕುರಿತು ಮಾಹಿತಿಯನ್ನು ನೀಡಿದರು.
ಅಂತರರಾಷ್ಟ್ರೀಯ ಪ್ಲಾಸ್ಟಿಕ್ ಮುಕ್ತ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಳ್ಳಲಾದ ಬಟ್ಟೆ ಚೀಲ ತಯಾರಿಕೆ ಸ್ಪರ್ಧೆಯ ಬಹುಮಾನಗಳನ್ನು ವಿತರಿಸಿ ಮುಂದೆ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಯಾವ ರೀತಿಯಲ್ಲಿ ಎದುರಿಸಬೇಕು ಹಾಗೂ ಮಕ್ಕಳು ತಮ್ಮ ಶಾಲಾ ಶಿಕ್ಷಣದ ಹಂತದಲ್ಲಿ ಇದರ ಕುರಿತು ತಯಾರಿ ನಡೆಸಬೇಕಾದ ಅವಶ್ಯಕತೆ ಕುರಿತು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿರ್ವ ಪಂಚಾಯತ್ ಅಧ್ಯಕ್ಷರು ಕೆ ಆರ್ ಪಾಟ್ಕರ್, ಅನಿತಾ ಮೆಂಡೊನ್ಸಾ, ಐರಿನ್ ಡಿಸೋಜ, ಸುನಿತಾ ಮೆನೇಜಸ್, ವೆಲೇರಿಯನ್, ರೋನಿ ಕ್ವಾಡ್ರಸ್, ವಿಲ್ಫ್ರೆಡ್ ಪಿಂಟೋ, ಹಾಗೂ ಶಾಲಾ ಹಳೆ ವಿದ್ಯಾರ್ಥಿ ವಿಜಯ್ ಧೀರಜ್ ಉಪಸ್ಥಿತರಿದ್ದರು.
ಲಯನ್ಸ್ ಕ್ಲಬ್ ಅಧ್ಯಕ್ಷ ಎಡ್ವರ್ಡ್ ಮಿನೇಜಸ್, ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಅಧ್ಯಕ್ಷೆ ಮೇಬಲ್ ಮಿನೇಜಸ್ ಸಂದರ್ಭೋಚಿತವಾಗಿ ಮಾತನಾಡಿದರು. ಶಿಕ್ಷಕಿ ಗೀತಾ ಪಿ ಇವರು ಸೈಬರ್ ಜಾಗೃತಿಯ ಘೋಷಣೆಗಳನ್ನು ಓದಿದರು. ಮುಖ್ಯಶಿಕ್ಷಕಿ ಉಷಾ ಎಸ್ ಸ್ವಾಗತಿಸಿ, ಶಿಕ್ಷಕ ಪಾಂಡುರಂಗ ಮಲ್ಯ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕ ದುರ್ಗ್ಯ ನಾಯ್ಕ್ ವಂದಿಸಿದರು.