ಬಿಜೆಪಿ ಪಕ್ಷದಿಂದ ಕಾಪು ವಿಧಾನಸಭಾ ಕ್ಷೇತ್ರಾದ್ಯಂತ ವಿಧಾನ ಪರಿಷತ್ ಚುನಾವಣಾ ಸರಣಿ ಸಭೆಗಳು
Posted On:
29-11-2021 10:10PM
ಕಾಪು : ಬಿಜೆಪಿ ಪಕ್ಷದಿಂದ ಕಾಪುವಿಧಾಸಭಾ ಕ್ಷೇತ್ರಾದ್ಯಂತ ವಿಧಾನ ಪರಿಷತ್ ಚುನಾವಣಾ ಪೂರ್ವಭಾವಿಯಾಗಿ ಸರಣಿ ಸಭೆಗಳು ನಡೆದವು.
ಮಹಾಶಕ್ತಿ ಕೇಂದ್ರವಾರು ಹಾಗು ನಾಲ್ಕೈದು ಪಂಚಾಯತ್ ಒಟ್ಟು ಸೇರಿಸಿ ಅಲೆವೂರು, ಮುದರಂಗಡಿ, ಹಿರಿಯಡ್ಕ, ಕಟಪಾಡಿ, ಉಚ್ಚಿಲ ಹಾಗೂ ಪಡುಬಿದ್ರಿಯಲ್ಲಿ ಒಟ್ಟು ಆರು ಕಡೆ ಪಂಚಾಯತ್ ಸದಸ್ಯರಿಗೆ ಚುನಾವಣೆಯ ಮಹತ್ವ, ಮತದಾನ ಮಾಡುವ ರೀತಿ ಇತ್ಯಾದಿಗಳ ಮಾಹಿತಿ ನೀಡಲಾಯಿತು.
ವಿಧಾನ ಪರಿಷತ್ ಅಭ್ಯರ್ಥಿಯೂ, ಕರ್ನಾಟಕ ಸರಕಾರದ ಸಚಿವರೂ ಆದ ಕೋಟ ಶ್ರೀನಿವಾಸ ಪೂಜಾರಿ ಎಲ್ಲಾ ಸಭೆಗಳಲ್ಲಿ ಭಾಗವಹಿಸಿ ತನಗೆ ಮತ ನೀಡುವಂತೆ ವಿನಂತಿಸಿದರು. ಕಾಪು ಮಂಡಲ ಅಧ್ಯಕ್ಷರಾದ ಶ್ರೀಕಾಂತ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಕಾಪು ಶಾಸಕರಾದ ಲಾಲಾಜಿ ಆರ್ ಮೆಂಡನ್, ರಾಜ್ಯ ಕಾರ್ಯಕಾರಿಣಿ ಸದಸ್ಯರೂ, ಕಾಪು ಕ್ಷೇತ್ರ ಚುನಾವಣಾ ಸಂಚಾಲಕರೂ ಆದ ಗುರ್ಮೆ ಸುರೇಶ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಕುತ್ಯಾರು ನವೀನ್ ಶೆಟ್ಟಿ, ಸದಾನಂದ ಉಪ್ಪಿನಕುದ್ರು, ಕಾಪು ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಅನಿಲ್ ಶೆಟ್ಟಿ, ಗೋಪಾಲಕೃಷ್ಣ ರಾವ್, ಮಂಗಳೂರು ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಮಂಗಳೂರು, ರಾಜ್ಯ ಎಸ್ ಸಿ ಮೋರ್ಚ ಪ್ರಧಾನ ಕಾರ್ಯದರ್ಶಿ ದಿನಕರ್ ಬಾಬು, ಕಾಪು ಮಂಡಲ ನಿಕಟಪೂರ್ವ ಅಧ್ಯಕ್ಷರಾದ ಪ್ರಕಾಶ್ ಶೆಟ್ಟಿ, ಜಿಲ್ಲಾ ಮಹಿಳಾ ಮೋರ್ಚ ಅಧ್ಯಕ್ಷರಾದ ವೀಣಾ ಶೆಟ್ಟಿ, ಮಹಾಶಕ್ತಿ ಕೇಂದ್ರ ಅಧ್ಯಕ್ಷರುಗಳಾದ ಜಿಯಾನಂದ ಹೆಗ್ಡೆ, ವಿಶ್ವನಾಥ ಕುರ್ಕಾಲು, ಸಂದೀಪ್ ರಾವ್, ಚಂದ್ರಶೇಖರ ಕೋಟ್ಯಾನ್, ಶಿವಪ್ರಸಾದ್ ಶೆಟ್ಟಿ, ಉದ್ಯಾವರ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಮಾರ್, ರವಿ ಶೆಟ್ಟಿ ಪಾದೆಬೆಟ್ಟು, ಶಶಿಕಾಂತ್ ಪಡುಬಿದ್ರಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಕ್ಷದ ಪ್ರಮುಖರಾದ ಸುರೇಂದ್ರ ಪಣಿಯೂರು, ಗಂಗಾಧರ ಸುವರ್ಣ, ನವೀನ್ ಎಸ್ ಕೆ, ಸಂಧ್ಯಾ ಕಾಮತ್, ಪವಿತ್ರ ಶೆಟ್ಟಿ, ಸುಭಾಸ್ ನಾಯ್ಕ್, ಕೇಶವ ಮೊಯ್ಲಿ, ಮುರಳಿಧರ್ ಪೈ, ಶಶಿಪ್ರಭಾ ಶೆಟ್ಟಿ, ಸಚಿನ್ ಸುವರ್ಣ, ಸುಮಾ ಶೆಟ್ಟಿ, ಎಲ್ಲಾ ಪಂಚಾಯತ್ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು, ಸದಸ್ಯರುಗಳು, ಶಕ್ತಿ ಕೇಂದ್ರ ಪ್ರಮುಖರು, ಜಿಲ್ಲಾ ಮತ್ತು ಮಂಡಲ ಪ್ರಮುಖರು ಉಪಸ್ಥಿತರಿದ್ದರು.