ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಪು : ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥ -ಅಪ್ಪು ಟ್ರೋಫಿ 2021

Posted On: 30-11-2021 08:43PM

ಕಾಪು : ಅಪ್ಪು ಟ್ರೋಫಿ 2021 ಪುನೀತ್ ರಾಜ್ ಕುಮಾರ್ ರವರ ಸ್ಮರಣಾರ್ಥವಾಗಿ ಕಾಪು ಪುರಸಭೆ ವ್ಯಾಪ್ತಿ, ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿ, ಇನ್ನಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಆಟಗಾರರಿಗಾಗಿ ಕಾಪು ಪ್ರೀಮಿಯರ್ ಲೀಗ್ 2021 ಕ್ರಿಕೆಟ್ ಪಂದ್ಯಾಟವು ಡಿಸೆಂಬರ್ 5 ರಂದು ಕಾಪುವಿನ ದಂಡತೀರ್ಥ ಶಾಲೆಯ ಮೈದಾನದಲ್ಲಿ ನಡೆಯಲಿದೆ.

ವಿಜೇತ ತಂಡಕ್ಕೆ ₹12,001 ಮತ್ತು ಟ್ರೋಫಿ, ರನ್ನರ್ ಅಪ್ ತಂಡಕ್ಕೆ ₹ 8,001 ಮತ್ತು ಟ್ರೋಫಿ ಸಿಗಲಿದೆ.

ಪಂದ್ಯಾಟದ ನಿಯಮಗಳು : ಪ್ರತಿ ಪಂದ್ಯಾಟವು 6 ಓವರ್‌ಗಳಾಗಿದ್ದು (ಸಮಯದ ಅಭಾವ ಇದ್ದಲ್ಲಿ ಓವರ್ ಕಡಿತಗೊಳಿಸಲಾಗುವುದು), ತೀರ್ಪುಗಾರರ ತೀರ್ಮಾನ ಅಂತಿಮ, ಲೀಗ್ ಮಾದರಿಯ ಪಂದ್ಯಾಕೂಟ, ಯಾವುದೇ ಬದಲಾವಣೆ ಇದ್ದಲ್ಲಿ ತಂಡಗಳಿಗೆ ಮುಂಚಿತವಾಗಿ ತಿಳಿಸಲಾಗುವುದು, ಯಾವುದೇ ಬದಲಾವಣೆಯ ಹಕ್ಕನ್ನು ವ್ಯವಸ್ಥಾಪಕರು ಹೊಂದಿರುತ್ತಾರೆ, ರಾಡಿ ಎಸೆತಕ್ಕೆ ಅವಕಾಶವಿಲ್ಲ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9741539169 (Google Pay) 9886502219