ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

700ಕ್ಕೂ ಅಧಿಕ ಮಕ್ಕಳ ಪಾಲಿಗೆ ಅನ್ನದಾತ, ನಿತ್ಯ ಅನ್ನದಾನ ಸೇವೆಯಲ್ಲಿ ತೊಡಗಿರುವ ಕೆ. ಪಿ. ಶ್ರೀನಿವಾಸ ತಂತ್ರಿ

Posted On: 01-12-2021 04:25PM

ಸಂಪಾದಿಸಿದ ಹಣವನ್ನು ಖರ್ಚು ಮಾಡದೇ ಬ್ಯಾಂಕ್ ನಲ್ಲಿ ಕೋಟ್ಯಂತರ ಹಣವನ್ನು ಭದ್ರವಾಗಿ ಇಟ್ಟವರ ನಡುವೆ ದೇವರಿಂದ ಪಡೆದದ್ದು ದೇವರಂತಹ ಮಕ್ಕಳಿಗೆ ಕೊಡೋಣ ಎನ್ನುವ ಇಚ್ಛೆಯುಳ್ಳ ವ್ಯಕ್ತಿ ಕೆ.ಪಿ. ಶ್ರೀನಿವಾಸ ತಂತ್ರಿ.

ಮೂಲತಃ ಉಡುಪಿಯ ಕೊರಂಗ್ರಪಾಡಿಯವರಾದ ಶ್ರೀನಿವಾಸ ತಂತ್ರಿಯವರು ವೃತ್ತಿಯಲ್ಲಿ ಜ್ಯೋತಿಷಿಗಳು ಹಾಗೂ ಪುರೋಹಿತರು, ಕಳೆದ 15 ವರ್ಷಗಳಿಂದ ಕಾಪು ತಾಲೂಕಿನ ಇನ್ನಂಜೆಯ ಮಡುಂಬುವಿನಲ್ಲಿ ವಾಸವಾಗಿದ್ದಾರೆ. ತನ್ನಲ್ಲಿಗೆ ಬಂದವರನ್ನು ಬಹುಷಃ ಬರೀಗೈಯಲ್ಲಿ ಕಳುಹಿಸಿದ ಉದಾಹರಣೆಯೇ ಇರಲಿಕ್ಕಿಲ್ಲ, ಕೋವಿಡ್ ಸಂದರ್ಭದಲ್ಲಿ ಒಂದನೇ ಅಲೆ ಮತ್ತು ಎರಡನೇ ಅಲೆ ಬಂದಾಗ ಸಮರ್ಪಕವಾಗಿ 38,000ಕ್ಕೂ ಹೆಚ್ಚಿನ ಜನರಿಗೆ ನಿತ್ಯ ಅನ್ನದಾನ ಮಾಡಿದ ಮಹಾದಾನಿ, ಕೋವಿಡ್ ಸಂದರ್ಭದಲ್ಲಿ ಸಾವಿರಾರು ಜನರಿಗೆ ಕಿಟ್ ವಿತರಿಸುವ ಮೂಲಕ ತನ್ನ ಹೃದಯ ವೈಶಾಲ್ಯತೆಯನ್ನು ಮೆರೆದಿದ್ದಾರೆ.

ಇದೀಗ ಇನ್ನಂಜೆ ಗ್ರಾಮದಲ್ಲಿರುವ ಎಸ್. ವಿ. ಎಸ್. ಆಂಗ್ಲ ಮಾಧ್ಯಮ ಶಾಲೆಯ 700ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ತನ್ನಿಂದ ಆಗುವಷ್ಟು ಸಮಯ ನಿತ್ಯ ಅನ್ನದಾನ ಸೇವೆಯನ್ನು ನೀಡುತ್ತೇನೆ ಎಂದು ಮಕ್ಕಳ ಹಸಿವನ್ನು ನೀಗಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ, ಜೊತೆಗೆ 282 ಸ್ಟೀಲಿನ ಪ್ಲೇಟ್ ಅನ್ನು ಕೂಡಾ ದಾನವಾಗಿ ನೀಡಿದ್ದಾರೆ. ಹೀಗೆ ಒಂದಲ್ಲ ಒಂದು ಮಹತ್ತರ ಕಾರ್ಯಗಳಿಂದ ಜನರ ಪ್ರೀತಿಗೆ, ಹೆಗ್ಗಳಿಕೆಗೆ ಕಾರಣರಾಗಿದ್ದಾರೆ.