ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ : ವಾರ್ಷಿಕ ಸಾಮಾನ್ಯ ಸಭೆ

Posted On: 01-12-2021 05:40PM

ಉಡುಪಿ : ನಾರಾಯಣಗುರು ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಲಿ, ಉಡುಪಿ, ಇದರ 2020 - 2021ನೇ ಸಾಲಿನ 19ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ನವೆಂಬರ್ 28, ಭಾನುವಾರ ಬಿಲ್ಲವರ ಸೇವಾ ಸಂಘ (ರಿ), ಬನ್ನಂಜೆ ಉಡುಪಿ ಇದರ ಶಿವಗಿರಿ ಸಭಾಂಗಣದಲ್ಲಿ ಜರುಗಿತು.

ಆರ್ಯ ಈಡಿಗ ಮಹಾಸಂಸ್ಥಾನ, ನಾರಾಯಣಗುರು ಮಠ, ರೇಣುಕಾ ಪೀಠ, ಸೋಲುರೂ, ಬೆಂಗಳೂರು ಇದರ ಪೀಠಾಧಿಪತಿ ಶ್ರೀಶ್ರೀಶ್ರೀ ವಿಖ್ಯಾತಾನಂದ ಸ್ವಾಮಿಜೀಯವರು ವಾರ್ಷಿಕ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ, ಆಶೀರ್ವಚನವನ್ನು ನೀಡಿದರು. ಬ್ಯಾಂಕಿನ ಅಧ್ಯಕ್ಷರು ಸಭೆಯನ್ನು ಉದ್ದೇಶಿಸಿ, ಕೋವಿಡ್-19ರ ಕೇಂದ್ರ ಸರಕಾರದ ಆದೇಶ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಮದಂತೆ ಸವಲತ್ತುಗಳನ್ನು ಗ್ರಾಹಕರಿಗೆ ನೀಡಲಾಗಿದ್ದು, ಗ್ರಾಹಕರ ಮತ್ತು ಸದಸ್ಯರ ಸಂಪೂರ್ಣ ಸಹಕಾರದಿಂದ ಬ್ಯಾಂಕ್ ಪ್ರಗತಿ ಸಾಧಿಸಿದೆ. ಸ್ವ-ಸಹಾಯ ಗುಂಪುಗಳಿಗೆ ಅತೀ ಕಡ್ಡಿಮೆ ಬಡ್ಡಿ ದರದಲ್ಲಿ ಸಾಲ ಒದಗಿಸುತ್ತಿದ್ದು, ಚಿನ್ನಾಭರಣ ಈಡಿನ ಸಾಲ, ವಾಹನ ಸಾಲ, ಅಡಮಾನ ಸಾಲ, ಭದ್ರತಾ ಸಾಲ, ಗೃಹ ನಿರ್ಮಾಣ ಸಾಲ, ವೈಯುಕ್ತಿಕ ಸಾಲ, ವೇತನ ಆಧಾರಿತ ಸಾಲ ಹಾಗೂ ವ್ಯಾಪಾರ ಅಭಿವೃದ್ಧಿ ಸಾಲಗಳನ್ನು ನೀಡುತ್ತಿದ್ದು, ವಾಣಿಜ್ಯ ಬ್ಯಾಂಕಿನ ಬಡ್ಡಿ ದರಕ್ಕೆ ಸ್ಪರ್ಧಾತ್ಮಕವಾಗಿ ಸಾಲ ನೀಡಲಾಗುತ್ತಿದೆ ಎಂದರು.

ಉಪಾಧ್ಯಕ್ಷರಾದ ವಿಜಯಾ ಜಿ ಬಂಗೇರ, ನಿರ್ದೇಶಕರಾದ ಕೆ. ಜಯಕುಮಾರ್‌, ಜಯಕುಮಾರ್‌ ಪರ್ಕಳ, ಬಿ.ಬಿ. ಪೂಜಾರಿ, ನವೀನ್ ಅಮೀನ್, ನಂದಕುಮಾರ್, ಆನಂದ ಜತ್ತನ್ನ, ಕೆ. ರಾಘವ, ಶಕುಂತಲಾ ಶ್ರೀನಿವಾಸ್, ಶಿವಾಜಿ ಸುವರ್ಣ, ಡಿ.ಆರ್ ರಾಜು, ಮತ್ತು ವೃತ್ತಿಪರ ನಿರ್ದೇಶಕರಾದ ಅಶೋಕ್ ಕುಮಾರ್, ಸಭೆಯಲ್ಲಿ ಉಪಸ್ಥಿತರಿದ್ದರು. ಸಲಹಾ ಸಮಿತಿ ಸದಸ್ಯರಾದ ರಾಮಚಂದ್ರ ಕಿದಿಯೂರು, ಸೂರ್ಯ ಪ್ರಕಾಶ್ ಹಾಗೂ ಸದಸ್ಯರಾದ ಶೇಖರ್ ಬಿ ಪೂಜಾರಿ ಮತ್ತು ಎ. ರವಿ ಇವರು ಬ್ಯಾಂಕಿನ ಅಭಿವೃದ್ಧಿಯ ಬಗ್ಗೆ ಸಲಹೆಯನ್ನು ನೀಡಿದರು.

ಬ್ಯಾಂಕಿನ ಅಧ್ಯಕ್ಷರಾದ ಹರಿಶ್ಚಂದ್ರ ಅಮೀನ್ ಸ್ವಾಗತಿಸಿ, ನಿರ್ದೇಶಕರಾದ ಶಕುಂತಲ ಶ್ರೀನಿವಾಸ್ ಪ್ರಾರ್ಥಿಸಿ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೋಶನ್ ಫೌಸ್ಟಿನ್ ಆಲ್ವರವರು ಬ್ಯಾಂಕಿನ 18ನೇ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ನಡಾವಳಿಕೆಗಳನ್ನು ವಾಚಿಸಿದರು. ಉಪಾಧ್ಯಕ್ಷರಾದ ವಿಜಯಾ ಜಿ ಬಂಗೇರರವರು ವಂದಿಸಿದರು.