ಕಾಪು : ಇಲ್ಲಿನ ಪುರಸಭಾ ವ್ಯಾಪ್ತಿಯ ಚುನಾವಣೆ ತಯಾರಿ ಬಗ್ಗೆ ಜೆಡಿಎಸ್ ಪಕ್ಷದಿಂದ ಇಂದು ಕಾಪು ಮಹಾಬಲ ಮಾಲ್ ನಲ್ಲಿರುವ ಪಕ್ಷದ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಯೋಗೀಶ್ ವಿ ಶೆಟ್ಟಿಯವರ ಉಪಸ್ಥಿತಿಯಲ್ಲಿ, ಕಾಪು ವಿಧಾನಸಭಾ ಕ್ಷೇತ್ರ ಅಧ್ಯಕ್ಷರಾದ ಇಕ್ಬಾಲ್ ಅತ್ರಾಡಿಯವರ ಅಧ್ಯಕ್ಷತೆಯಲ್ಲಿ ಸಭೆ ಜರಗಿತು.
ಎಚ್ ಡಿ ದೇವೇಗೌಡರು ಪ್ರಧಾನಮಂತ್ರಿಯಾಗಿ ಮತ್ತು ಎಚ್ ಡಿ ಕುಮಾರಸ್ವಾಮಿಯವರು ಕರ್ನಾಟಕದಲ್ಲಿ ಮುಖ್ಯಮಂತ್ರಿಯಾಗಿ ಮಾಡಿದಂತಹ ಕೆಲಸಗಳನ್ನು ಜನರಿಗೆ ತಿಳಿಸುವುದು ಹಾಗೂ ಕಾಪು ಪುರಸಭೆ ಮತ್ತು ಪ್ರಾಧಿಕಾರದಿಂದಾಗಿ ಆದ ತೊಂದರೆಗಳು, ಅದನ್ನು ಜನರಿಗೆ ಮನವರಿಕೆ ಮಾಡಿಕೊಟ್ಟು ಇನ್ನು ಮುಂದಿನ ದಿನಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಪುರಸಭೆಗೆ ಆಯ್ಕೆ ಮಾಡುವಲ್ಲಿ, ಜನರು ಸಹಕಾರ ಕೊಟ್ಟರೆ, ಪುರಸಭೆಯಲ್ಲಿ ಏನು ತೊಂದರೆ ಆಗುತ್ತಿತ್ತು ಅದನ್ನೆಲ್ಲ ನಿವಾರಿಸುವಲ್ಲಿ ಖಂಡಿತವಾಗಿ ಯಶಸ್ವಿಯಾಗುತ್ತೇವೆ. ನಮ್ಮನ್ನು ಬೆಂಬಲಿಸಿ ಎಂದು ಜನರಲ್ಲಿ ಸಹಕಾರವನ್ನು ಕೋರಬೇಕು, ಎಲ್ಲಾ ಕಾರ್ಯಕರ್ತರು, ನಾಯಕರು ಒಗ್ಗಟ್ಟಿನಿಂದ ದುಡಿದು ಹೆಚ್ಚಿನ ಸಂಖ್ಯೆಯಲ್ಲಿ ಪುರಸಭಾ ಸದಸ್ಯರು ಆಯ್ಕೆಯಾಗುವಲ್ಲಿ ಪ್ರಯತ್ನಿಸಬೇಕು ಎಂದರು.
ಕಾರ್ಯಾಧ್ಯಕ್ಷರಾದ ವಾಸುದೇವ ರಾವ್ ರವರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ವೀಕ್ಷಕರಾದ ಸುಧಾಕರ್ ಶೆಟ್ಟಿ, ಉದಯ ಹೆಗ್ಡೆ, ಎಂ ಟಿ ವೆಂಕಟೇಶ್, ರಾಜು ಆರ್ ಪುತ್ರನ್, ಅಬ್ದುಲ್ ಹಮೀದ್ ಯೂಸುಫ್, ತಬಸುಮ್, ಉದಯ ಆರ್ ಶೆಟ್ಟಿ, ಶ್ರೀನಾಥ, ಅರವಿಂದ ಶೆಟ್ಟಿ, ರಶೀದ್, ಅಲ್ತಾಫ್, ಶಂಸುದ್ದೀನ್, ಸನವರ್, ಪಕ್ಷ ಕಾರ್ಯಕರ್ತರು ಉಪಸ್ಥಿತರಿದ್ದರು.