ಶಿರ್ವ ಸಂತ ಮೇರಿ ಮಹಾವಿದ್ಯಾಲಯದಲ್ಲಿ-ಬೀಳ್ಕೊಡುಗೆ ಸಮಾರಂಭ
Posted On:
04-12-2021 09:25PM
ಶಿರ್ವ: ಇಲ್ಲಿನ ಸಂತ ಮೇರಿ ಮಹಾವಿದ್ಯಾಲಯದಲ್ಲಿ 36ವರ್ಷ ಅಧಿಕ ಕಾಲ ಕಾಲೇಜಿನ ಕಚೇರಿ ಸಹಾಯಕ ಸಿಬ್ಬಂದಿರಾದ ಶ್ರೀರಂಗರವರ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮ ಇಂದು ನೆರವೇರಿತು.
ಯಾವುದೇ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ಜೊತೆಗೆ ಕಚೇರಿ ಸಿಬ್ಬಂದಿ ವರ್ಗದವರು ಪ್ರಮುಖ ಪಾತ್ರವನ್ನು ವಹಿಸಲಿದ್ದಾರೆ. ಕಾಲೇಜಿನ ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದರಲ್ಲಿ ಸಹಾಯಕ ಸಿಬ್ಬಂದಿ ಪಾತ್ರ ಮಹತ್ವದ್ದು. ಶ್ರೀರಂಗರವರು ನಮ್ಮ ಸಂಸ್ಥೆಯಲ್ಲಿ ಅಚ್ಚುಕಟ್ಟಾಗಿ ಅವರ ಕಾರ್ಯದಕ್ಷತೆಯನ್ನು ನಿಭಾಯಿಸುವಲ್ಲಿ ಯಶಸ್ವಿಯಾಗಿದ್ದರು ಹಾಗೂ ಅವರ ಕಾರ್ಯವೈಖರಿಯಿಂದ ಎಲ್ಲರ ಮನದಾಳವನ್ನು ಹೊಂದಿದ್ದರು. ಮೃದು ಸ್ವಭಾವಿ ಆಗಿದ್ದ ಶ್ರೀರಂಗರವರ ಎಲ್ಲರ ಜೊತೆಗೆ ಬಾಳಿ ತಮ್ಮ ಎಲ್ಲಾ ಸಹಕಾರವನ್ನು ನೀಡುತ್ತಿದ್ದರು ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸಂತ ಮೇರಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಧರ್ಮಗುರುಗಳಾದ ಡೇನ್ನಿಸ್ ಅಲೆಕ್ಸಾಂಡರ್ ಡೇಸ ರವರು ಮಾತನಾಡಿ ಶುಭ ಹಾರೈಸಿದರು.
ಕಚೇರಿ ಸಿಬ್ಬಂದಿಯಾದ ಲಾರೆನ್ಸ್ ಡಿಸೋಜರವರು ಸನ್ಮಾನ ಪತ್ರವನ್ನು ವಾಚಿಸಿದರು.
ಕಚೇರಿ ಸಿಬ್ಬಂದಿಯಾದ ರಿಚಡ್೯ರವರು ಮಾತನಾಡಿದರು, ಅಧ್ಯಾಪಕ ವೃಂದದ ವತಿಯಿಂದ ಹಿರಿಯ ಉಪನ್ಯಾಸಕ ವಿಟ್ಟಲ್ ನಾಯಕರವರ ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಕಚೇರಿ ಅಧೀಕ್ಷಕಿ ಡೋರಿನ್ ಡಿಸಿಲ್ವಾ, ವಿದ್ಯಾರ್ಥಿ ಕ್ಷೇಮಾಧಿಕಾರಿ ಯಶೋಧ, ಸ್ಟಾಫ್ ಸೆಕ್ರೆಟರಿ ರೀಮಾ ಲೋಬೋ, ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷೆ ಅಮಿತಾ, ಆಡಳಿತ ಮಂಡಳಿಯ ಸದಸ್ಯೆ ಲೀನಾ ಮಚ್ಚಾದೋ , ನಿವೃತ್ತಿ ಅಧ್ಯಾಪಕರು ಮತ್ತು ಆಡಳಿತ ಸಿಬ್ಬಂದಿ ವರ್ಗದವರು, ಸಂತ ಮೇರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಐರಿನ್ ಮೆಂಡೋನ್ಸಾ, ಅಧ್ಯಾಪಕ ಬಂಧುಗಳು ಹಾಗೂ ಕಚೇರಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾಲೇಜಿನ ಪ್ರಾಂಶುಪಾಲರಾದ ಡಾ| ಹೆರಾಲ್ಡ್ ಐವನ್ ಮೋನಿಸ್ ರವರು ಸರ್ವರನ್ನು ಸ್ವಾಗತಿಸಿದರು. ಉಪನ್ಯಾಸಕ ಕೋಸ್ಟಾನ್ವಿ ಗೊನ್ಸಾಲ್ವ್ಸ್ ಕಾರ್ಯಕ್ರಮ ನಿರೂಪಿಸಿದರು. ಕಚೇರಿ ಸಿಬ್ಬಂದಿ ಗ್ಲೆಂಡಾ ಡಿಸೋಜಾ ವಂದಿಸಿದರು.