ಕಾರ್ಕಳ : ಬಜಗೋಳಿ ಸರಕಾರಿ ಪದವಿಪೂರ್ವ ಕಾಲೇಜಿನ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಘಟಕದ ಉದ್ಘಾಟನೆಯು ಡಿಸೆಂಬರ್ 4ರಂದು ನೆರವೇರಿತು.
ವಿದ್ಯಾರ್ಥಿಗಳನ್ನು ಉದ್ದೇಶಿಸಿ ಉಡುಪಿ ಜಿಲ್ಲಾ ಸಹಪ್ರಮುಖ್ ದಯಾನಂದ್ ಬಾಯರ್ ಮಾತನಾಡಿ ವಿದ್ಯಾರ್ಥಿ ಪರಿಷತ್ ಒಂದು ಸ್ವತಂತ್ರ ಸಂಘಟನೆಯಾಗಿದ್ದು ಯಾವುದೇ ರಾಜಕೀಯ ಪಕ್ಷದ ಕೈ ಗೊಂಬೆಯಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆಯಾದಾಗ ಪ್ರತಿ ಹಂತದಲ್ಲೂ ವಿದ್ಯಾರ್ಥಿಗಳ ಪರವಾಗಿ ಧ್ವನಿ ಎತ್ತಿದೆ ಎಂದರು.
ಕಾರ್ಕಳ ನಗರ ಅಧ್ಯಕ್ಷರಾದ ಅಭಿಷೇಕ್ ಸುವರ್ಣ ಅವರು ಜವಾಬ್ದಾರಿ ಘೋಷಣೆ ಮಾಡಿದರು. ಅಧ್ಯಕ್ಷರಾಗಿ ರಂಜನ್, ಕಾರ್ಯದರ್ಶಿಯಾಗಿ ಸುಮಂತ್ ಆಯ್ಕೆಯಾದರು.
ಈ ಸಂದರ್ಭದಲ್ಲಿ ಕಾರ್ಕಳ ತಾಲೂಕು ಸಂಚಾಲಕ ಕಾಬೆಟ್ಟು ಮನೀಶ್ ಕುಲಾಲ್, ಸಹಸಂಚಾಲಕ ಶಿವರುದ್ರ ಪಾಟೀಲ್, ರಾಜ್ಯಕಾರ್ಯಕಾರಿಣಿ ಸದಸ್ಯ ಯುಕೇಶ್ ಇಂದಬೆಟ್ಟು, ನಗರ ವಿದ್ಯಾರ್ಥಿನಿ ಪ್ರಮುಖ್ ಮುಕ್ತಿವರ್ಧನ ಹಾಗೂ ಪ್ರಮುಖ ಕಾರ್ಯಕರ್ತರಾದ ನಿರಂಜನ್ ನಾಯಕ್, ಗೌತಮ್ ಕಾಂತಾವರ, ದೀಕ್ಷಿತ್,ಪ್ರಜ್ವಲ್, ಮಹಾಲಕ್ಷ್ಮಿ, ಉಪಸ್ಥಿತರಿದ್ದರು.