ಪ್ರತಿಯೊಬ್ಬ ವ್ಯಕ್ತಿ ಕುಟುಂಬದ ಆಧಾರವಾಗಿದ್ದು , ಜೀವದ ಬೆಲೆಗೆ ನಮ್ಮವರನ್ನೆ ಕಾಯುವ ನಮ್ಮ ಮನೆ ,ಒಂದು ಕ್ಷಣದ ಮುಜುಗರಕ್ಕೆ ಹೆಲ್ಮೆಟ್ ಬಳಸದಿದ್ದರೆ ಆಗುವ ಅನಾಹುತದ ಬಗ್ಗೆ ಸಂದೇಶ ಸಾರುವ ಸ್ನೇಹಿತನ ಬದುಕಿನಲ್ಲಿ ನಡೆದ ಘಟನೆಯನ್ನ ಕಿರುಚಿತ್ರವಾಗಿ ಚಿತ್ರಿಸಿರುವ ಮುಗುರು ಮೋಕೆ ಕಿರುಚಿತ್ರದ ಬಿಡುಗಡೆ ಸಮಾರಂಭವು ಕಾರ್ಕಳದ ಇನ್ನದ ಮರದ ಮನೆ ಆವರಣದಲ್ಲಿ ದಿನಾಂಕ 25/07/2020 ರ ಶನಿವಾರ ನಮ್ಮ ನೆಚ್ಚಿನ ಜಿಲ್ಲಾ ಪಂಚಾಯತ್ ಸದಸ್ಯೆ ರೇಶ್ಮಾ ಉದಯ ಕುಮಾರ್ ಶೆಟ್ಟಿ ಶುಭಹಾರೈಸಿ ಬಿಡುಗಡೆಗೊಳಿಸಿದರು..
ಅದರ್ಶ ಯುವಕ ಮಂಡಲ ಬೆಳ್ಮಣ್ ಇವರ ಮುಂದಾಳತ್ವ,ನಿತ್ಯಾನಂದ ಶೆಟ್ಟಿ ಬೆಳ್ಮಣ್ ಇವರ ನಿರ್ಮಾಣದ ಈ ಕಿರುಚಿತ್ರಕ್ಕೆ ಕಥೆ ನಿರ್ದೇಶನ ದೀಪಕ್ ಬೆಳ್ಮಣ್,ಸಾಹಿತ್ಯ ರಚನೆ ದಿಲೀಪ್ ಡಿ.ಕೆ,ಸುಮಧುರ ಕಂಠದ ಕೆ.ಪಿ ಮಿಲನ್ ಆಚಾರ್ಯ ಸಚ್ಚರಿಪೇಟೆ ಇವರ ಸಂಗೀತ,ಚಿತ್ರದ ದೃಶ್ಯಕ್ಕೆ ಜೀವ ತುಂಬಿದ ರಾಜೇಶ್ ಬೆಳುವಾಯಿ,ಎಡಿಟಿಂಗ್ ಮಾಡಿದ ಶ್ರೀಜಿತ್ ಬೆಳುವಾಯಿ ಇವರೆಲ್ಲರ ಸಹಕಾರದೊಂದಿಗೆ ಮೂಡಿ ಬಂದ ಈ ಕಿರುಚಿತ್ರವು ಕಾರ್ಕಳ ಬಿ.ಜೆ.ಪಿ ಯುವಮೋರ್ಚಾ ಇದರ ಅಧ್ಯಕ್ಷರು ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಉದ್ಯಮಿ ಇನ್ನ ಉದಯ ಕುಮಾರ್ ಶೆಟ್ಟಿ, ದೀಪಕ್ ಬೆಳ್ಮಣ್, ಸುಖೇಶ್ ಶೆಟ್ಟಿ ಇನ್ನ, ಸುರೇಶ್ ಡಿ ಕುಲಾಲ್,ಸಂದೀಪ್ ಅಂಚನ್ ಹಾಗೂ ಇನ್ನಿತರ ಉಪಸ್ಥಿತಿಯ ಶುಭಾಶಯದೊಂದಿಗೆ ನಡೆಯಿತು..
ಸಣ್ಣ ಪ್ರಯತ್ನದೊಂದಿಗೆ ಮೂಡಿ ಬಂದ ನಮ್ಮ ಕಿರುಚಿತ್ರವನ್ನ ಪೋತ್ಸಾಹಿಸಿ..