ಕಾಪು : ಹಲಸು ಮೇಳಕ್ಕೆ ಚಾಲನೆ
ಕಾಪು : ಸಂಸ್ಕೃತಿ ಈವೆಂಟ್ಸ್ ಪಸ್ತುತಿಯಲ್ಲಿ ಅನಿಲ್ ಕುಮಾರ್ ಸಾರಥ್ಯದಲ್ಲಿ ಶುಕ್ರವಾರ ಕಾಪು ಹಳೆ ಮಾರಿಗುಡಿ ಸಭಾಂಗಣದಲ್ಲಿ ಜರಗಿದ ಬೃಹತ್ ಹಲಸು ಮೇಳವನ್ನು ಕಾಪು ತಾಲ್ಲೂಕು ತಹಶಿಲ್ದಾರ್ ಡಾ.ಪ್ರತಿಭಾ ಆರ್. ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಅವರು ಮೇಳಗಳ ಆಯೋಜನೆಯಿಂದ ನಮ್ಮ ಊರಿನ ವ್ಯಾಪಾರಿಗಳ ವ್ಯಾಪಾರಕ್ಕೆ ಪ್ರೋತ್ಸಾಹಕವಾಗುವುದರ ಜೊತೆಗೆ ಆರ್ಥಿಕ ಸಬಲೀಕರಣಕ್ಕೆ ಸಹಾಯಕವಾಗಲಿದೆ. ಕಾಪು ಹಲಸು ಮೇಳದ ಉದ್ದೇಶ ಪ್ರಶಂಸನೀಯ ಎಂದು ಹೇಳಿದರು.
ಕಾಪು ಶ್ರೀ ಹಳೆ ಮಾರಿಗುಡಿ ಮೊಕ್ತೇಸರ
ಪ್ರಸಾದ್ ಶೆಣೈ, ಕಾಪು ಶ್ರೀ ಹೊಸಮಾರಿಗುಡಿ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ವಾಸುದೇವ ಶೆಟ್ಟಿ, ಪ್ರಗತಿಪರ ಕೃಷಿಕ ನವೀನ್ ಶೆಟ್ಟಿ ಕುತ್ಯಾರು ಮಾತನಾಡಿದರು.
ಈ ಸಂದರ್ಭ ಉದ್ಯಮಿ ಪ್ರಭಾಕರ ಪೂಜಾರಿ, ಯೋಗೀಶ್ ಶೆಟ್ಟಿ ಬಾಲಾಜಿ, ವೈ ಸುಕುಮಾರ್,
ಉದಯ ಶೆಟ್ಟಿ ಇನ್ನಾ, ಹಳೆ ಮಾರಿಗುಡಿ ಟ್ರಸ್ಟಿ ರಾಮ ನಾಯಕ್, ಜೆಸಿಐ ಕಾಪು ಅಧ್ಯಕ್ಷೆ ಅನಿತಾ ಹೆಗ್ಡೆ ಉಪಸ್ಥಿತರಿದ್ದರು.
ರತ್ನಾಕರ ಇಂದ್ರಾಳಿ ಸ್ವಾಗತಿಸಿದರು. ಅನಿಲ್ ಕುಮಾರ್ ವಂದಿಸಿದರು.
