ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ವಿಶ್ವಹಿಂದು ಪರಿಷದ್ ಭಜರಂಗದಳ ಇನ್ನಂಜೆ 'ವಿಷ್ಣು ವಲ್ಲಭ' ಘಟಕ ಉದ್ಘಾಟನೆ

Posted On: 30-07-2020 10:51PM

ವಿಶ್ವಹಿಂದು ಪರಿಷದ್ ಭಜರಂಗದಳ ಶ್ರೀ ವಿಷ್ಣು ವಲ್ಲಭ ಘಟಕ ಇನ್ನಂಜೆ ಇದರ ಉದ್ಘಾಟನಾ ಕಾರ್ಯಕ್ರಮ ಇಂದು ಜರುಗಿತು. ನೂತನ ವಿಶ್ವ ಹಿಂದೂ ಪರಿಷತ್ ಶ್ರೀ ವಿಷ್ಣು ವಲ್ಲಭ ಘಟಕದ ಅಧ್ಯಕ್ಷರಾಗಿ ಶ್ರೀ ಕೆಪಿ ಶ್ರೀನಿವಾಸ್ ತಂತ್ರಿಗಳು ಹಾಗೂ ಭಜರಂಗದಳದ ಸಂಚಾಲಕರಾಗಿ ಶ್ರೀ ರಾಜೇಶ್ ಕುಲಾಲ್ ಇವರಿಗೆ ಜವಾಬ್ದಾರಿಯನ್ನು ನೀಡಲಾಯಿತು. ಜೊತೆಯಲ್ಲಿ ಘಟಕಕ್ಕೆ ನೂತನ ಪದಾಧಿಕಾರಿಗಳ ಜವಾಬ್ದಾರಿ ಘೋಷಣೆಯು ನಡೆಯಿತು. ಈ ಸಂಧರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀ ದಿನೇಶ್ ಮೆಂಡನ್, ಜಿಲ್ಲಾ ಸುರಕ್ಷಾ ಪ್ರಮುಖ್ ಶ್ರೀ ರಾಜೇಶ್ ಕೋಟ್ಯಾನ್, ಕಾಪು ಪ್ರಖಂಡ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಶಿರ್ವ, ಭಜರಂಗದಳ ಕಾಪು ವಲಯ ಪ್ರಮುಖ್ ಶ್ರೀ ಸುಧೀರ್ ಕಾಪು, ಹಿಂದು ಮುಖಂಡರಾದ ಶ್ರೀ ದಿನೇಶ್ ಪಾಂಗಾಳ ಹಿರಿಯರಾದ ರವಿವರ್ಮ ಶೆಟ್ಟಿ ಇನ್ನಂಜೆ, ಶ್ರೀ ನವೀನ್ ಅಮೀನ್ ಶಂಕರಪುರ, ಆನಂದ್ ಇನ್ನಂಜೆ, ಮಾಲಿನಿ ಶೆಟ್ಟಿ ಇನ್ನಂಜೆ, ದಿವೇಶ್ ಶೆಟ್ಟಿ ಇನ್ನಂಜೆ,ಮಧುಸೂದನ್ ಆಚಾರ್ಯ, ಶ್ರೀ ಪ್ರವೀಣ್ ಶೆಟ್ಟಿ , ವಿಎಚ್ ಪಿ ಪಾಂಗಾಳ ಘಟಕದ ಅಧ್ಯಕ್ಷರಾದ ಗಿರೀಶ್ ಕುಮಾರ್, ಮತ್ತು ಶ್ರೀ ವಿಷ್ಣು ವಲ್ಲಭ ಇನ್ನಂಜೆ ಘಟಕದ ಸದಸ್ಯರು ಉಪಸ್ಥಿತರಿದ್ದರು.