ಕೊರೋನಾ ಎಂಬ ಕಣ್ಣಿಗೆ ಕಾಣದ ವೈರಸ್ ವಿಶ್ವವನ್ನೇ ಅಲುಗಾಡಿಸಿ ಬಿಟ್ಟಿದೆ. ಈ ನಿಟ್ಟಿನಲ್ಲಿ ನಮ್ಮ ದೇಶವು ಕೂಡ ಇದಕ್ಕೆ ಹೊರತಾಗಿಲ್ಲ. ಪ್ರಧಾನಿಯವರು ಹೇಳಿದಂತೆ ಆತ್ಮ ನಿಭ೯ರ ದೇಶವಾಗ ಬೇಕಾದರೆ ಭಾರತೀಯ ಉತ್ಪನಗಳಿಗೆ ಇಲ್ಲಿ ಮಾರುಕಟ್ಟೆ ಸೃಷ್ಠಿಗೊಳಿಸಬೇಕು ಭಾರತೀಯ ಉತ್ಪನ್ನಗಳು ರಫ್ತುಗೊಳಿಸಬೇಕಾಗಿದೆ. ಈ ನಿಟ್ಟಿನಲ್ಲಿ ಉಡುಪಿಯ ಸಮಾಜ ಸೇವಕರೊಬ್ಬರು ತನ್ನ ವಿನೂತನ ಆನ್ವೇಷಣೆಯ ಮೂಲಕ ಸುದ್ದಿಯಲ್ಲಿದ್ದಾರೆ.
ಉಡುಪಿ ದೊಡ್ದಣಗುಡ್ಡೆಯ ರಾಧಾಕೃಷ್ಣ ಶೆಟ್ಟಿ ಪಿವಿಸಿ ಪೈಪ್ ನಿಂದ ಅತಿ ಕಡಿಮೆ ವೆಚ್ಚದ ಪುಲ್ ಬಾಡಿ ಸ್ಯಾನಿಟೈಸರ್ ಸ್ಟೇ ಯಂತ್ರದ ಆನ್ವೇಷಣೆ ಮಾಡಿದ್ದಾರೆ. ಎರಡು ಬಾರಿ ವಿಫಲ ಯತ್ನದ ಹೊರತಾಗಿ ಎರಡು ತಿಂಗಳ ಶ್ರಮದಿಂದ ರೂಪಿಸಿದ ಪುಲ್ ಬಾಡಿ ಸ್ಯಾನಿಟೈಸರ್ ಸ್ಟೇ ಯಂತ್ರಕ್ಕೆ 40 ರಿಂದ 45 ಸಾವಿರ ವೆಚ್ಚವಾಗಿದೆ.
ಇದೇ ಮಾದರಿಯ ಬೇರೆ ಯಂತ್ರಗಳಿಗೆ ಸುಮಾರು ಒಂದು ವರೆ ಲಕ್ಷ ರೂ ದರವಿದೆ.ಇವರು ತಯಾರಿಸಿದ ಪಿವಿಸಿ ಪೈಪ್ ಸೆನ್ಸಾರ್ ಸಕ್ಯೂ೯ಟ್ , ಟೈಮರ್ ರಿಲೇ ಎಸ್.ಎಂ.ಪಿ.ಎಸ್ ಅಳವಡಿಸಿದ ಈ ಯಂತ್ರ ಕರೆಂಟ್ ಅಥವಾ ಜನರೇಟರ್ ಮೂಲಕ ಕಾಯ೯ ನಿವ೯ಹಿಸುತ್ತದೆ.
ತನ್ನ ಗೆಳೆಯರೊಬ್ಬರು ಕಳುಹಿಸಿದ ಸ್ಟೇ ಯಂತ್ರದ ಭಾವಚಿತ್ರ ನೋಡಿದ ತಕ್ಷಣ ತಾನು ಯಾಕೆ ಈ ಮಾದರಿಯ ಯಂತ್ರವನ್ನು ಸ್ಥಳೀಯ ವಸ್ತುಗಳನ್ನು ಬಳಸಿ ತಯಾರಿಸಬಾರದು ಎಂಬ ಕಲ್ಪನೆ ನನ್ನಲ್ಲಿ ಬಂತು ಸೆನ್ಸಾರ್ ಮೋಟರ್ ಯಂತ್ರ ಕೈ ಕೊಟ್ಟರೆ ಮರಳಿ ಯತ್ನದ ಬಳಿಕ ಈ ಯಂತ್ರ ತಯಾರಿಸಲು ಸಾಧ್ಯವಾಗಿದೆ ಎಂದು ಅವರು ಹೇಳುತ್ತಾರೆ.
ಕೇವಲ 10 ಸೆಕೆಂಡ್ ನಲ್ಲಿ ಪುಲ್ ಬಾಡಿ ಸ್ವಾನಿ ಟೈಸ್ ಮಾಡಲು ಇದರಿಂದ ಸಾಧ್ಯ ಕೇವಲ 10 ಎಂ.ಎಲ್ ಸ್ಯಾನಿಟೈಸರ್ ಸಾಕು .8 ಗಂಟೆ ನಿರಂತರವಾಗಿ ಈ ಯಂತ್ರವನ್ನು ಚಾಲು ಇಟ್ಟರೂ ಒಂದು ಯೂನಿಟ್ ವಿದ್ಯುತ್ ಸಾಕಾಗುತ್ತದೆ.
ಪುಲ್ ಬಾಡಿ ಸ್ಯಾನಿಟೈಸರ್ ಮಾಡುವ ವ್ಯಕ್ತಿ ಕಣ್ಣಿಗೆ ತಾಗದಂತೆ ಎಚ್ಚರಿಕೆ ವಹಿಸಬೇಕು ಚಮ೯ ವ್ಯಾಧಿ ಇದ್ದವರು ಇದರಿಂದ ದೂರ ಉಳಿದರೆ ಉತ್ತಮ ಎಂದು ಅವರು ಹೇಳುತ್ತಾರೆ.
ಈ ಮಾದರಿಯ ಯಂತ್ರವನ್ನು.ಸಕಾ೯ರಿ ಕಚೇರಿ ಸಂಕಿಣ೯, ಕೈಗಾರಿಕೆ, ಮಾಲ್,ಸಾವ೯ಜನಿಕ ಸ್ಥಳದಲ್ಲಿ ಉಪಯೋಗ ಮಾಡಬಹುದಾಗಿದೆ.
ತಾನು ಬೇರೆ ಬೇರೆ ಉದ್ಯಮಗಳನ್ನು ಸ್ಥಾಪನೆ ಮಾಡಿ ಅದನ್ನು ಬೇರೆ ಯುವಕರಿಗೆ ನಡೆಸಲು ನೀಡಿದ್ದಾರೆ.
ಅತೀ ಕಡಿಮೆ ದರದಲ್ಲಿ ನಿಮಿ೯ಸಿದ ಈ ಯಂತ್ರಕ್ಕೆ ಒಳ್ಳೆಯ ಬೇಡಿಕೆಯಿದೆ. ಭಾರತ ದೇಶವು ಆತ್ಮ ನಿಭ೯ರವಾಗಲು ಎಲ್ಲರೂ ಕೊಡುಗೆ ನೀಡಬೇಕು ಎಂದು ಅವರು ಹೇಳುತ್ತಾರೆ.
ಯುವಜನತೆ ಈ ರೀತಿಯ ಸಂಶೋಧನಾ ಕಾಯ೯ದಲ್ಲಿ ತೊಡಗಿಕೊಳ್ಳಲು ಕರೆ ನೀಡುವ ಅವರು, ಕರೋನಾ ಮುಕ್ತ ಸಮಾಜ ನಿಮಾ೯ಣ ಕೇವಲ ಸಕಾ೯ರ ದ ಕೆಲಸವಲ್ಲ ಪ್ರತಿಯೊಬ್ಬರೂ ಕೂಡ ಜವಾಬ್ದಾರಿ ಅರಿತು ಇರಬೇಕು ಎನ್ನುವ ರಾಧಾಕೃಷ್ಣ ಶೆಟ್ಟಿ, ದೊಡ್ಡ ಕೊಡುಗೆ ನೀಡಿದರೂ ಸರಳವಾದ ಮಾತುಗಳು ಎಲ್ಲರಿಗೂ ಮಾದರಿಯಾಗಿದೆ.
ರಾಘವೇಂದ್ರ ಪ್ರಭು, ಕವಾ೯ಲು