ಪಡುಬಿದ್ರಿ ರೋಟರಿ ಕ್ಲಬ್ ವತಿಯಿಂದ ಬ್ರಹ್ಮಸ್ಥಾನದ ಬಳಿಯ ಗದ್ದೆಯಲ್ಲಿ " ರೃೆತ ಬಂಧು" ನೇಜಿ ನೇಡುವ ಕಾರ್ಯಕ್ರಮಕ್ಕೆ ಉಡುಪಿ ಜಿ.ಪ. ಸದಸ್ಯ ಶಶಿಕಾಂತ್ ಪಡುಬಿದ್ರಿ ಚಾಲನೆ ನೀಡಿ ಮಾತನಾಡಿದರು.
ಕೃಷಿ ಅವನತಿಯತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಯುವ ಜನರಿಗೆ ಕೃಷಿಯತ್ತ ಒಲವು ಮೂಡಿಸುವಂತಹ ಇಂತಹ ಕಾರ್ಯಕ್ರಮವು ಬಹಳ ಅತ್ಯಗತ್ಯವಾಗಿದೆ.
ಸಾವಯವ ಕೃಷಿ ಪದ್ದತಿಯನ್ನು ಬೆಳಸೋಣ, ದೇಶದ ಅಭಿವೃದ್ಧಿ ಯಲ್ಲಿ ಕ್ಯೆ ಜೋಡಿಸೋಣ ಎಂದರು.
ಈ ಸಂದರ್ಭದಲ್ಲಿ ನಿಕಟ ಪೂರ್ವ ವಲಯ ಸಹಾಯಕ ಗವರ್ನರ್ ಗಣೇಶ್ ಅಚಾರ್ಯ ಉಚ್ಚಿಲ , ಪೂರ್ವ ಅಧ್ಯಕ್ಷರಾದ ಮಾಧವ ಸುವರ್ಣ, ಪಿ. ಕೃಷ್ಣ ಬಂಗೇರ, ರಮೀಜ್ ಹುಸೇನ್ , ಸದಸ್ಯರಾದ ರಮೇಶ್ ಯು, ಬಿ.ಯಸ್.ಅಚಾರ್ಯ , ಸಂತೋಷ್ ಪಡುಬಿದ್ರಿ, ಗೀತಾ ಅರುಣ್, ತಸ್ಲೀನ್ ಅರ್ಹ, ಮಮತಾ ಸಾಲ್ಯಾನ್, ಪುಷ್ಪವತಿ ಅಚಾರ್ಯ ಉಪಸ್ಥಿತರಿದ್ದರು
ರೋಟರಿ ಅಧ್ಯಕ್ಷ ಕೇಶವ್ ಸಾಲ್ಯಾನ್ ಸ್ವಾಗತಿಸಿ, ಕಾರ್ಯದರ್ಶಿ ಮಹಮ್ಮದ್ ನಿಯಾಜ್ ವಂದಿಸಿ, ಸುಧಾಕರ್ ಕೆ ಕಾರ್ಯಕ್ರಮ ನಿರೂಪಿಸಿದರು.