ಶಿರ್ವ.02, ಆಗಸ್ಟ್ : ಪುಂಡರೀಕಾಕ್ಷ (55) ಎಂಬುವವರು ಕಳೆದ 35 ವರ್ಷಗಳಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಮಂಗಳೂರಿನ ಕಂಕನಾಡಿ ಆಸ್ಪತ್ರೆ ಹಾಗೂ ಮನಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರಿಗೆ ಬಿಪಿ, ಶುಗರ್ ಕಾಯಿಲೆ ಕೂಡ ಇತ್ತು ಎಂದು ತಿಳಿದು ಬಂದಿದೆ,
ಇವರು ಮದುವೆಯಾಗದೆ ಒಬ್ಬಂಟಿಯಾಗಿ ಕಾಪು ತಾಲೂಕಿನ ಶಿರ್ವದ ಪಡುಮಠ ಮಟ್ಟಾರು ಎಂಬಲ್ಲಿ ವಾಸವಾಗಿದ್ದರು.
ದಿನಾಂಕ 27/07/2020 ರಿಂದ 02/08/2020 ರ ಬೆಳಿಗ್ಗೆ 10:30 ರ ಮಧ್ಯಾವಧಿಯಲ್ಲಿ ಪುಂಡರೀಕಾಕ್ಷ (55) ಇವರು ಹೃದಯಾಘಾತ ಅಥವಾ ಇನ್ಯಾವುದೋ ಕಾರಣದಿಂದ ಮೃತ ಪಟ್ಟಿದ್ದು ಮೃತ ದೇಹವು ಸಂಪೂರ್ಣ ಕೊಳೆತ ರೀತಿಯಲ್ಲಿ ಪತ್ತೆಯಾಗಿದೆ. ಕಾಪು ಸಮಾಜ ಸೇವಕ ಸೂರಿ ಶೆಟ್ಟಿ ಶವವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದರು.. ಎಂದು ಬಲ್ಲ ಮೂಲಗಳು ತಿಳಿಸಿವೆ
ಈ ಬಗ್ಗೆ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ