ಲಯನ್ಸ್ ಕ್ಲಬ್ ಬಂಟಕಲ್ಲು 2020-21ನೇ ಸಾಲಿನ ಪದಗ್ರಹಣ ಕಾರ್ಯಕ್ರಮ
Posted On:
08-08-2020 07:07PM
ಬಂಟಕಲ್ಲು ಲಯನ್ಸ್ ಕ್ಲಬ್ ಬಿ ಸಿ ರೋಡ್ ಇದರ ಪದಗ್ರಹಣ ಕಾರ್ಯಕ್ರಮವು ನಿನ್ನೆ ಸಂಜೆ ಗಂಟೆ 5.30 ಕ್ಕೆ ಬಿ.ಸಿ ರೋಡ್
ಪಾಂಬೂರು ನಿಶಾ ಕೆಟರರ್ಸ್ ನ ಮಾಲಕರಾದ ಇಗ್ನೇಶಿಯಸ್ ಡಿಸೋಜ ರವರ ಮನೆಯಲ್ಲಿ ನೆರವೇರಿತು.
ಈ ಸಭೆಯಲ್ಲಿ 317C ಲಯನ್ ಜಿಲ್ಲಾ ಗವರ್ನರ್ ಲಯನ್ N .M ಹೆಗ್ಡೆ ಮತ್ತು 317 C II ಪ್ರಾಂತ್ಯ ಅಧ್ಯಕ್ಷ ಲಯನ್ ಸ್ಟೀಫನ್ ಕಾಸ್ಟ್ಲಿನೋ , ಲಿಯೋ ಕ್ಲಬ್ ನ ಕೋ ಅರ್ಡಿನೇಟ್ ಲಯನ್ ಜೆರಾಲ್ಧ್ ಫೆರ್ನಾಂಡಿಸ್, ವಲಯ ಅಧ್ಯಕ್ಷ ಲಯನ್ ಲಾನ್ಸಿ ಕೊರ್ಡ ಮೊದಲಾದವರು ಉಪಸ್ಥಿತರಿದ್ದರು.
ಕೇವಲ ಕ್ಲಬ್ ಸದಸ್ಯರ ಉಪಸ್ಥಿತಿಯಲ್ಲಿ ಸರಳವಾಗಿ ಕಾರ್ಯಕ್ರಮ ನೆರವೇರಿತು ಬಿ.ಸಿ ರೋಡ್ ಕ್ಲಬ್ ನ ಅಧ್ಯಕ್ಷರಾಗಿ ಲಯನ್ ವಿಜಯ್ ಧೀರಜ್ ಪದ ಪ್ರಧಾನ ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಲಯನ್ ಅರುಂಧತಿ ಪ್ರಭು, ಖಜಾಂಚಿಯಾಗಿ ದಿನೇಶ್ S K .ಪ್ರಮಾಣ ವಚನ ಸ್ವೀಕರಿಸಿದರು.
ನಿರ್ಗಮನ ಅಧ್ಯಕ್ಷರು ಲಯನ್ K .R ಪಾಟ್ಕರ್ ತಮ್ಮ ಅನಿಸಿಕೆ ತಿಳಿಸಿ ನೂತನ ಅಧ್ಯಕ್ಷರಿಗೆ ಶುಭ ಹಾರೈಸಿದರು. ಇದೇ ಸಮಯದಲ್ಲಿ ನೂತನ ಲಿಯೋ ಕ್ಲಬ್ ಉದ್ಘಾಟನೆಗೊಂಡು ನೂತನ ಲಿಯೋ ಅಧ್ಯಕ್ಷರಾಗಿ ಲಿಯೋ ಲಾಯಲ್ ಡಿಸೋಜಾ ಕಾರ್ಯದರ್ಶಿ ಲಯನ್ ಗ್ಲೇನ್ ಪಿ0ಟೋ, ಹಾಗೂ ಖಜಾಂಜಿ ಆಗಿ ಆರೋನ್ ಡಿಸೋಜರವರು ನೂತನ ಲಿಯೋ ಕ್ಲಬ್ ನ ಪದಾಧಿಕಾರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು ಲಯನ್ ಅನಿತಾ ಮಥ್ಯಾಯಸ್ ಕಾರ್ಯಕ್ರಮ ನಿರೂಪಿಸಿದರು.