ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ಇಲ್ಲಿ ತರಬೇತಿ ಪಡೆದು ಯಶಸ್ವೀ ಉದ್ಯಮಿ ಗಳ ಸಂಘಟನೆ "ಆಸರೆ" ಇದರ ವತಿಯಿಂದ ಕೋವಿಡ್ 19 ಕೋರೋಣ ಇದರ ಸಮಸ್ಯೆ ಗಳ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮವು ರುಡ್ಸೆಟ್ ಸಂಸ್ಥೆ ಬ್ರಹ್ಮಾವರ ದಲ್ಲಿ ಜರಗಿತು.
ಕಾರ್ಯಕ್ರಮದಲ್ಲಿ ರುಡ್ಸೆಟ್ ನಿರ್ದೇಶಕರಾದ ಶ್ರೀ ಪಾಪ ನಾಯಕ್ ಆಸರೆ ಸಂಘಟನೆಯ ಅಧ್ಯಕ್ಷ ರಾದ ಕಿಶ್ವರಿ ಸಂಸ್ಥೆ ಯ ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್, ಸಂತೋಷ ಶೆಟ್ಟಿ, ಆಸರೆ ಸಂಘಟನೆಯ ಮಾಜಿ ಅಧ್ಯಕ್ಷರು ಹಾಗೂ ರೋಟರಿ ಮಾಜಿ ಸಹಾಯಕ ಗವರ್ನರ್ ಎಮ್ ಮಹೇಶ್ ಕುಮಾರ್, ಗೌರವ ಅಧ್ಯಕ್ಷ ರಾದ ರಾಜೇಶ್, ಡಿ. ಕೆ ಸಿ ಅಮೀನ್, ಕಾರ್ಯದರ್ಶಿ ಉಮೇಶ್ ಹಾಗೂ ಆಸರೆ ಸಂಘಟನೆ ಯ ಸದಸ್ಯರು ಉಪಸ್ಥಿತರಿದ್ದರು ಕಾರ್ಯಕ್ರಮ ನಿರೂಪಣೆಯನ್ನು ಮಾಜಿ ಕಾರ್ಯದರ್ಶಿ ಕುಶ ಕುಮಾರ್ ಮಾಡಿದರು.