ಕಾಪು,09.ಆಗಸ್ಟ್ : ನಾಳೆಯಿಂದ ಸ್ವಯಂ ಪ್ರೇರಿತ ಬಂದ್ ಇಲ್ಲ ಈಗಾಗಲೇ ಸಾಕಷ್ಟು ವಹಿವಾಟು ಇಲ್ಲದೆ ಹೈರಾಣಾಗಿರುವ ವ್ಯಾಪಾರಿಗಳು ಅರ್ಧ ದಿನದ ಸ್ವಯಂ ಪ್ರೇರಿತ ಬಂದ್ ಅನ್ನು ನಿಲ್ಲಿಸುವ ಆಲೋಚನೆಯಲ್ಲಿದ್ದಾರೆ. ಬಂದ್ ಆರಂಭವಾದಾಗಿನಿಂದ ಜನರು ಬೆಳಿಗ್ಗೆಯೂ ಪೇಟೆಗೆ ಬರುವುದನ್ನು ನಿಲ್ಲಿಸಿರುವುದರಿಂದ ಇದ್ದ ವ್ಯಾಪಾರವೂ ನಿಂತು ಹೋಗಿದ್ದು ವರ್ತಕರು ದಿಕ್ಕೆಟ್ಟು ಹೋಗಿದ್ದಾರೆ. ಬಸ್ಸುಗಳಲ್ಲೂ ಪ್ರಯಾಣಿಕರು ಕಡಿಮೆ ಆಗಿರುವುದರಿಂದ ಇಂದು ಬಸ್ಸುಗಳು ಸಂಚಾರವನ್ನೇ ಮಾಡಲಿಲ್ಲ. ಒಟ್ಟಿನಲ್ಲಿ ಆದದ್ದಾಗಲಿ ನಮ್ಮ ಜಾಗ್ರತೆ ನಾವು ಮಾಡಿಕೊಂಡು ಇಡೀ ದಿನ ವ್ಯಾಪಾರ ಮಾಡುವ ಎಂದು ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ