ಪಡುಬಿದ್ರಿಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತ್ತಿದ್ದ ರಾಷ್ಟ್ರ ಪಕ್ಷಿ ನವಿಲಿನ ಜೀವ ಉಳಿಸಲು ಪ್ರಯತ್ನ ಪಟ್ಟ ಕಾಪು ತುಳುನಾಡು ಹಿಂದೂ ಸೇನೆಯ ಕಾರ್ಯಕರ್ತರು.
ಪಡುಬಿದ್ರಿ,10.ಆಗಸ್ಟ್ : ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅವರ ಮನೆಯ ಹತ್ತಿರದ ತೋಡಿನ ಹತ್ತಿರದಲ್ಲಿ ಕಳೆದ ಒಂದೆರಡು ದಿನಗಳಿಂದ ನವಿಲೊಂದು ಕಾಲಿಗೆ ಪೆಟ್ಟಾಗಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಡುತಿತ್ತು, ಇದನ್ನು ಗಮನಿಸಿದ ಸ್ಥಳೀಯ ನಾಗರಿಕರು ಕಾಪು ತುಳುನಾಡು ಹಿಂದೂ ಸೇನೆಯ ಪ್ರಮುಖರಾದ ಪ್ರಶಾಂತ್ ಪೂಜಾರಿ ಕಾಪು ಅವರಿಗೆ ತಿಳಿಸಿದರು, ವಿಷಯ ತಿಳಿದ ತಕ್ಷಣ ಪಡುಬಿದ್ರಿಗೆ ಧಾವಿಸಿ ನವಿಲಿನ ಜೀವ ಉಳಿಸಲು ಪ್ರಯತ್ನ ಪಟ್ಟರು, ಪ್ರಯತ್ನ ಫಲಕೊಡದೆ ನವಿಲು ಮರಣ ಹೊಂದಿತು . ಮರಣ ಹೊಂದಿದ ನವಿಲಿನ ಅಂತ್ಯ ಸಂಸ್ಕಾರ ಮಾಡಲು ನವಿಲನ್ನು ಕರ್ನಾಟಕ ಅರಣ್ಯ ಇಲಾಖೆ, ಕಾಪು ಉಪವಲಯದ ಅರಣ್ಯಾಧಿಕಾರಿ ಅಭಿಲಾಷ್ ಇವರಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಶಿವಾನಂದ್ ಪೂಜಾರಿ ಕಾಪು, ಚಿತ್ತನ್ ಪೂಜಾರಿ ಮತ್ತು ನಿತಿನ್ ಜೊತೆಯಲ್ಲಿದ್ದರು.