ಯುವವಾಹಿನಿ ಕಾಪು ಘಟಕದ ನೂತನ ಅಧ್ಯಕ್ಷರಾಗಿ ಸೌಮ್ಯ ರಾಕೇಶ್ ಕುಂಜೂರು ಆಯ್ಕೆ
Posted On:
10-08-2020 10:59PM
ಶುಭ ಸತ್ಕಾರ 'ಕಾಪುದಪ್ಪೆ'..,ಈ ಭಕ್ತಿ ಶ್ರದ್ಧೆಯಲ್ಲಿ ನಮ್ಮನ್ನುದ್ಧರಿಸುವ ಮಹಾನ್ ಶಕ್ತಿ ಮಾತೆಯ ಪುಣ್ಯ ನೆಲೆ ಬೀಡೇ ಕಾಪು. ಹಲವು ವೈಶಿಷ್ಟ್ಯಗಳಿಂದಾವೃತ್ತವಾದ ಈ ಊರಿನ ಹೆಗ್ಗಳಿಕೆಯಲ್ಲಿ ಬಹುರೂಪಿ ಸಂಘ ಸಂಸ್ಥೆಗಳ ಪಾತ್ರವೂ ಗಣನೀಯ. ಕಾಪುವಿನಲ್ಲಿರುವ *ಯುವವಾಹಿನಿ* ಯಂತಹ ಅಪ್ಪಟ ಸಮಾಜಾಭ್ಯುದಯದ ಬಳಗಕ್ಕೆ ಪ್ರಸ್ತುತ ಸಾಲಿನ ಅಧ್ಯಕ್ಷರಾಗಿ ಅಲಂಕೃತರಾದವರು ಶ್ರೀಮತಿ ಸೌಮ್ಯ ರಾಕೇಶ್
ಸಾಂಘಿಕ ಚಿರಪರಿಚಿತವಾದ ಈ ನಾಮಧೇಯದ ಮುನ್ನಡೆಯಲ್ಲಿ ಸಕ್ರೀಯ ನೈಪುಣ್ಯತೆಗಳು ತುಂಬಿಕೊಂಡಿವೆ. ಹೆಣ್ಣೊಬ್ಬಳು ಆದರ್ಶನೀಯ ಸಂಸ್ಥೆಯನ್ನು ಕಾರ್ಯದಕ್ಷವಾಗಿ ಮುನ್ನಡೆಸಬಲ್ಲರೆಂಬುದಕ್ಕೆ ಸಮರ್ಥನೀಯಾಂಶಗಳು ಸೌಮ್ಯ ರಾಕೇಶ್ ಪಾಲಿಗೆ ಬಹಳಷ್ಟಿದೆ. ಅಂತರಾಷ್ಟ್ರೀಯ ಕೂಟ ಜೇಸಿಐ ಸಂಸ್ಥೆಯಲ್ಲಿ ವಿವಿಧ ಮುಖ್ಯನೆಲೆಯ ಪ್ರತಿನಿಧಿಯಾಗಿ ತನ್ನ ಜವಾಬ್ದಾರಿಯ ಯೋಗ್ಯ ನ್ಯಾಯಕ್ಕೆ ಪ್ರಶಂಸನೀಯರೆನಿಸಿದ್ದಾರೆ. ಇನ್ನು ಸದ್ದುಗದ್ದಲವಿಲ್ಲದೆ ಅನೇಕ ಐಕ್ಯತೆಯ ಚಟುವಟಿಕೆಗಳಲ್ಲಿ ಜೊತೆಯಾಗುತ್ತಿದ್ಧಾರೆ
ಸೌಮ್ಯರವರ ಎಲ್ಲಾ ಅರ್ಹನ ಡೆಯ ರೂವಾರಿ ನಲ್ಮೆಯ ನಲ್ಲ ರಾಕೇಶ್ ಕುಂಜೂರು. ಪ್ರತಿಷ್ಠಿತ ಜೇಸೀ ವಲಯ 15 ರ ಅಧ್ಯಕ್ಷರಾಗಿ, ಪಂಚಪುಣ್ಯ ಮಹಾಸಾನಿಧ್ಯ ಕಟಪಾಡಿ ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿಯ ಸದಸ್ಯರಾಗಿ ಹತ್ತು ಹಲವು ಸೇವಾ ಸಂಸ್ಥೆಗಳ ಸಕ್ರೀಯ ಸಹಭಾಗಿಯಾಗಿ ಶ್ರೇಷ್ಠ ಸಾಮಾಜಿಕ ಕಳಕಳಿಯ ಪ್ರತಿನಿಧಿಯೂ, ಜನಮನದ ಜೀವನಾಡಿ ಉದಯವಾಣಿ ಪತ್ರಿಕೆಯ ಪತ್ರಕರ್ತರಾಗಿ ಜನಮನ್ನಣೆಯ ಸೃಜನಶೀಲ ಸಂಪನ್ನ ರಾಕೇಶ್ ಕುಂಜೂರು, ಸಹಧರ್ಮಿಣಿಯ ಯುವವಾಹಿನಿ ಹುದ್ದೆಯ ಯಶೋಗಾಥೆಗೆ ಸಾಥ್ ಆಗುವುದಂತೂ ನಿಚ್ಚಳ.
ಮಾನವೀಯ ಮನಸ್ಸುಗಳಿಂದ ಮಾತ್ರ ಮನುಷ್ಯ ಸಹ್ಯ ಸಮಾಜ ನಿರ್ಮಾಣ ಸಾಧ್ಯವೆಂದ ಪರಮಪೂಜ್ಯ ನಾರಾಯಣ ಗುರುಗಳ ಸಂದೇಶಾನುಷ್ಠಾನದ ಬದ್ಧ ಪ್ರಯತ್ನಗಳು ಸೌಮ್ಯ ರಾಕೇಶ್‌ರವರ ನೇತೃತ್ವದಲ್ಲಿ ಸಾಕಾರವಾಗಲಿ. ಒಗ್ಗಟ್ಟನ್ನು ಬಲಗೊಳಿಸುವ ಚೈತನ್ಯ ಚಿಗುರಲಿ. ಹೊಸ ಕನಸುಗಳು ಗಮ್ಯ ತಲುಪಲಿ. ಅವಿಸ್ಮರಣೀಯ ಸೇವೆಗಳ ಸರದಿ ಕಾಪು ಯುವವಾಹಿನಿಯದ್ದಾಗಲಿ. ಅಭಿನಂದನೆಯ ಅಕ್ಷತೆ... ಸೌಮ್ಯ ರಾಕೇಶ್.