ಇನ್ನಂಜೆ, 11.ಆಗಸ್ಟ್ : ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಇನ್ನಂಜೆಯ "ವಿಷ್ಣು ವಲ್ಲಭ" ಘಟಕದಲ್ಲಿ ಸಂಸ್ಥಾಪನಾ ದಿನದ ಅಂಗವಾಗಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕರ್ತರು ಭಾರತಮಾತೆಗೆ ಪುಷ್ಪರ್ಚಾನೆ ಮಾಡಿದ ನಂತರ ಅಧ್ಯಕ್ಷರಾದ ವಿದ್ವಾನ್ ಕೆ.ಪಿ ಶ್ರೀನಿವಾಸ್ ತಂತ್ರಿಯವರು ದೀಪ ಪ್ರಜ್ವಲಿಸುವ ಮೂಲಕ ಮಾತನಾಡಿ ಹಿಂದೂ ಧರ್ಮದ ಬಗ್ಗೆ ಅಪಹಾಸ್ಯ ಅಥವಾ ಅವಹೇಳನ ಮಾಡಿದ್ದಲ್ಲಿಅವರು ಯಾರೇ ಆಗಿರಲಿ ಅವರ ವಿರುದ್ಧ ನಾವು ಹೋರಾಡಬೇಕು, ಹಿಂದೂ ಧರ್ಮದ ಐಕ್ಯತೆ, ಒಗ್ಗಟ್ಟನ್ನು ಇಡೀ ವಿಶ್ವಕ್ಕೆ ತೋರಿಸಬೇಕು ಎಂದರು. ಕಾಪು ಪ್ರಖಂಡ ಕಾರ್ಯದರ್ಶಿ ಕಾರ್ಯದರ್ಶಿ ಜಯಪ್ರಕಾಶ್ ಪ್ರಭು ಇವರು ಮಾತನಾಡಿ ವಿಶ್ವ ಹಿಂದೂ ಪರಿಷತ್ 56 ವರ್ಷಗಳನ್ನು ಪೂರೈಸಿದೆ . ಈ ಸಂದರ್ಭದಲ್ಲಿ 55 ವರ್ಷ ವಿಶ್ವ ಹಿಂದೂ ಪರಿಷದ್ಗೆ ಮಾರ್ಗದರ್ಶನ ನೀಡಿದ ಪೇಜಾವರದ ವಿಶ್ವೇಶ ತೀರ್ಥ ಸ್ವಾಮೀಜಿಗಳನ್ನು ಸ್ಮರಿಸಿದರು.
ಗೋಹತ್ಯೆ, ಲವ್ ಜಿಹಾದ್ ನಂತಹ ಧರ್ಮ ವಿರೋಧಿ ಕಾರ್ಯಗಳನ್ನು ನಿಲ್ಲಿಸಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು, ವಿದ್ಯಾರ್ಥಿ ಪ್ರಮುಖ್ ಸ್ವಸ್ತಿಕ್ ಮಡುಂಬು ಇವರು ಹಿಂದೂ ಸಮಾಜದ ಬಗ್ಗೆ ಒಂದೆರಡು ಮಾತುಗಳನಾಡಿದರು.. ಈ ಸಂದರ್ಭದಲ್ಲಿ ಭಜರಂಗ ದಳದ ಸಂಚಾಲಕರು ರಾಜೇಶ್ ನಿಸರ್ಗ, ವಿ ಹಿಂ ಪ ಉಪಾಧ್ಯಕ್ಷರು ಆದ ರಾಘುವೇಂದ್ರ ಶೆಟ್ಟಿ, ಮಾಲಿನಿ ಇನ್ನಂಜೆ, ದಿವೇಶ್ ಕಲ್ಯಾಲು, ವರುಣ್ ಮಡುಂಬು, ವಿ ಹಿಂ ಪ ಪದಾಧಿಕಾರಿಗಳು ಭಜರಂಗದಳ ಕಾರ್ಯಕರ್ತರು , ಮತ್ತಿತರು ಉಪಸ್ಥಿತರಿದ್ದರು. ಕಾರ್ಯದರ್ಶಿಯಾದ ನಿತೀಶ್ ಕಲ್ಯಾಲು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವಿಕೇಶ್ ಮಡುಂಬು ಇವರು ಧನ್ಯವಾದಗೈದರು.