ಬಿರುವೆರ್ ಕಾಪು ಸೇವಾ ಟ್ರಸ್ಟ್ 2020ನೇ ಸಾಲಿನ ವಿದ್ಯಾರ್ಥಿ ವೇತನ ಅರ್ಜಿ ಅಹ್ವಾನ
Posted On:
18-08-2020 10:21AM
ಕಾಪು ತಾಲೂಕಿನಲ್ಲಿ ಎರಡನೇ ಬಾರಿಗೆ ಬಿರುವೆರ್ ಕಾಪು ಸೇವಾ ಟ್ರಸ್ಟ್ ಇದರ ವತಿಯಿಂದ ಕಾಪು ತಾಲೂಕಿನ ಬಿಲ್ಲವ ಸಮಾಜದ ವಿದ್ಯಾರ್ಥಿಗಳಿಗೆ *ಜ್ಞಾನ ದೀವಿಗೆ 2020* ಎಂಬ ಯೋಜನೆಯಲ್ಲಿ ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ
ಆರ್ಥಿಕವಾಗಿ ಹಿಂದುಳಿದಿದ್ದು ಹಿಂದಿನ ತರಗತಿಯಲ್ಲಿ ಕಲಿಕೆಯಲ್ಲಿ ಶೇಕಡಾ 85% ಗಿಂತ ಹೆಚ್ಚು ಅಂಕಗಳಿಸಿದ್ದರೆ ಆತನು ಅಥವಾ ಆಕೆಯು *ಜ್ಞಾನ ದೀವಿಗೆ 2020* ಯೋಜನೆಯ ಫಲಾನುಭವಿಯಾಗಬಹುದು
(ವಿ.ಸೂ : ಬಿರುವೆರ್ ಕಾಪು ಸೇವಾ ಟ್ರಸ್ಟ್ ಪರಿಶೀಲಿಸಿದ ಅರ್ಜಿಯಲ್ಲಿ ಯೋಜನೆಗೆ ಅರ್ಹರಾದವರು ಮಾತ್ರ ಈ ಯೋಜನೆಯ ಪ್ರಯೋಜನ ಪಡೆದುಕೊಳ್ಳಬಹುದು.. )
ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳು
1. 2020 ನೇ ಸಾಲಿನ SSLC ಮತ್ತು 2nd PUC ಪಾಸಾದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ.
2. ಹಿಂದಿನ ತರಗತಿಯಲ್ಲಿ ಶೇಕಡಾ 85% ಅಂಕ
ಪಡೆದಿರಬೇಕು.
3. ವಿದ್ಯಾರ್ಥಿವೇತನ ಪಡೆಯಲು ಇಚ್ಛಿಸುವ
ವಿದ್ಯಾರ್ಥಿಗಳು ತಮ್ಮ ಹಿಂದಿನ ಪರೀಕ್ಷೆಯ
ಮಾರ್ಕ್ ಕಾರ್ಡ್ ಲಗತ್ತೀಕರಿಸಿ, ಈ ಕೆಳಗೆ
ತಿಳಿಸಿರುವ ವಿಳಾಸಕ್ಕೆ ವಿದ್ಯಾರ್ಥಿಯೇ ಸ್ವತಃ
ಅರ್ಜಿ ಸಲ್ಲಿಸಬೇಕು.
4. ಅರ್ಜಿಯೊಂದಿಗೆ ವಿದ್ಯಾರ್ಥಿಯ ಒಂದು ಫೋಟೊ ಲಗತ್ತಿಸಿರಬೇಕು ಮತ್ತು ಮೊಬೈಲ್ ನಂಬರ್ ನಮೂದಿಸಿರಬೇಕು.
5. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ : 10/ 09/2020
6. ಅರ್ಜಿಯನ್ನು ಬಿರುವೆರ್ ಕಾಪು ಸೇವಾ ಟ್ರಸ್ಟ್ ಗೆ ಬರೆದಿರಬೇಕು ಮತ್ತು ಕೆಳಗೆ ಬರೆದ ವಿಳಾಸವನ್ನು ನಮೂದಿಸರಬೇಕು.
ಅರ್ಜಿ ಸಲ್ಲಿಸುವ ವಿಳಾಸ
(ಈ ಕೆಳಗಿನ ವಿಳಾಸಕ್ಕೆ ಪೋಸ್ಟ್ ಮುಖಾಂತರವೇ ಸಲ್ಲಿಸಬೇಕು)
Anil amin kaup
City travels & tours
Janardhana complex
Main road kaup
Near trupthi hotel - 574106
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ
ಕಾರ್ತಿಕ್ ಅಮಿನ್ : 74833 45138
ಸುಧಾಕರ್ ಸಾಲ್ಯಾನ್:9901329819