ಬಂಟಕಲ್ಲು - ಕೊಂಕಣಿ ಮಾನ್ಯತಾ ದಿನಾಚರಣೆ
Posted On:
20-08-2020 08:09PM
ಕೊಂಕಣಿ ಬಾಷೆಯನ್ನು 1992 ರ ಅಗೋಷ್ಟ್ 20 ರಂದು
ಸಂವಿಧಾನದ 8 ನೇ ಪರಿಚ್ಚೇದಕ್ಕೆ ಸೇರಿಸಲಾಯಿತು. ಕೊಂಕಣಿ ಬಾಷೆಗೆ ಸಂವಿಧಾನಿಕ ಸ್ಥಾನ ಮಾನ ಸಿಕ್ಕಿದ ಈ ದಿನವನ್ನು ಕೊಂಕಣಿ ಮಾನ್ಯತಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಬಂಟಕಲ್ಲು ರಾಜಾಪುರ ಸಾರಸ್ವತ ಯುವ ವೃಂದದ ಆಶ್ರಯದಲ್ಲಿ ಕೊಂಕಣಿ ಮಾನ್ಯತಾ ದಿನಾಚರಣೆಯನ್ನು ಬಂಟಕಲ್ಲು ದೇವಸ್ಥಾನದ ವಠಾರದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ಶೈಕ್ಷಣಿಕ, ತಾಂತ್ರಿಕ, ಸಮಾಜಿಕವಾಗಿ ಸೇವೆ ನೀಡುತ್ತಿರುವ ಕಟಪಾಡಿ ಶ್ರೀ ಸತ್ಯೇಂದ್ರ ಪೈ ಯವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕೊಂಕಣಿ ಬಾಷೆಯ ವಿಶೇಷತೆ ಬಗ್ಗೆ ತಿಳಿಸಿ ನಮ್ಮ ಬಾಷೆಯ ಬಗ್ಗೆ ಅಭಿಮಾನ ಹೊಂದಿ ಬಾಷೆಯ ಉಳಿವಿಗೆ ಎಲ್ಲರೂ ಪ್ರಯತ್ನಿಸಬೇಕು, ಕೊಂಕಣಿ ಬಾಷೆಯ ಇತಿಹಾಸವನ್ನು ಎಲ್ಲರೂ ತಿಳಿಯುವಂತಾಗಬೇಕು.ಇದರ ಇತಿಹಾಸವನ್ನು ದಾಖಲಿಸಿಕೊಳ್ಳುವ ಕಾರ್ಯ ಆಗಲಿ ಎಂದರು. ಚಲನ ಚಿತ್ರ, ಅಥವಾ ಧಾರವಾಹಿಯ ಮೂಲಕ ಇತಿಹಾಸ ದಾಖಲಿಸುವಂತಾಗಲಿ ಎಂದರು ...
ಈ ಸಂಧರ್ಭದಲ್ಲಿ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಕೊರೊನಾ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಶ್ರೀಮತಿ ಪ್ರೀತಿ ನಾವೆಲ್ಕರ್ ಬಂಟಕಲ್ಲು ಇವರಿಗೆ ಕೊಂಕಣಿ ಮಾನ್ಯತಾ ದಿವಸ್ನ ಗೌರವ ಪ್ರಧಾನ ಮಾಡಲಾಯಿತು. ಇವರನ್ನು ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಜಯರಾಮ ಪ್ರಭು ಗಂಪದಬೈಲು ಇವರು ಶಾಲು ಹೊದಿಸಿ ಸನ್ಮಾನಿಸಿದರು.
ಕಾರ್ಯಕ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿ ಈ ಕಾರ್ಯಕ್ರಮವು ಪ್ರತೀವರ್ಷ ನಡೆಯುವಂತಾಗಲಿ ಎಂದು ಹಾರೈಸಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯರೂ , ಮಂಗಳೂರು ವಿ.ವಿಯ ಕೊಂಕಣಿ ಅಧ್ಯಾಯನ ಪೀಠದ ದ ಸದಸ್ಯರು ಆಗಿರುವ ಶ್ರೀ ಪುಂಡಲೀಕ ಮರಾಠೆಯವರು ಪ್ರದಾನ ಬಾಷಣ ಮಾಡಿದರು. ಕೊಂಕಣಿ ಮಾನ್ಯತಾ ದಿವಸದ ಮಹತ್ವ, ಅಕಾಡಮಿಯಿಂದ ಸಿಗುವ ಸಹಾಯಗಳು, ಬಾಷೆ ನಡೆದು ಬಂದ ದಾರಿ ಹಾಗೂ ಅಕಾಡಮಿ ಯ ವಿಚಾರಗಳನ್ನು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಬರಹಗಾರ ಶ್ರೀ ರಾಘವೇಂದ್ರ ಪ್ರಭು ಕರ್ವಾಲು, ಶಿರ್ವ ಸಂತ ಮೇರಿ ಕಾಲೇಜಿನ ಉಪನ್ಯಾಸಕ ಶ್ರೀ ವಿಠಲ ನಾಯಕ್, ದೇವಸ್ಥಾನದ ಆಡಳಿತ ಮಂಡಳಿಯ ಉಪಾಧ್ಯಕ್ಷ ಶ್ರೀ ಉಮೇಶ್ ಪ್ರಭು,ಯುವ ವೃಂದದ ಸದಸ್ಯರು, ಸಮಾಜ ಭಾಂಧವರು ಉಪಸ್ಥಿತರಿದ್ದರು.
.ಯುವ ವೃಂದದ ಗೌರವಾಧ್ರಕ್ಷ ಶ್ರೀ ಕೆ ಆರ್ ಪಾಟ್ಕರ್ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು.
ಯುವ ವೃಂದದ ಅಧ್ಯಕ್ಷ ಶ್ರೀ ವಿಶ್ವನಾಥ ಬಾಂದೇಲ್ಕರ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯದರ್ಶಿ ಶ್ರೀ ಆಶಿಷ್ ಪಾಟ್ಕರ್ ಧನ್ಯವಾದ ನೀಡಿದರು. ಯುವ ವೃಂದದ ಜೊತೆಕಾರ್ಯದರ್ಶಿ ಪ್ರಾರ್ಥಿಸಿ, ಕುಮಾರಿ ರಚಿತಾ ಪಾಟ್ಕರ್ ರವರು ಕಾರ್ಯಕ್ರಮ ನಿರ್ವಹಿಸಿದರು.