ಕಾಪು.24,ಆಗಸ್ಟ್ : ಉಬೇದುಲ್ಲಾ (54), ಮಲ್ಲಾರ್ ನಿವಾಸಿ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹತ್ತಿರ ಮನೆ. ಉದ್ಯಾವರ ಬೊಲ್ಜೆ ರೈಲ್ವೆ ಬ್ರಿಡ್ಜ್ ಪಕ್ಕದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವ ಪತ್ತೆ.. ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿದ್ದು, ಬ್ರಿಡ್ಜ್ ಪಕ್ಕದಲ್ಲೇ ಬೈಕ್, ಮೊಬೈಲ್ ವಾಚ್ ಪತ್ತೆಯಾಗಿದ್ದು, ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ಶವವನ್ನು ಮಣಿಪಾಲ ಶವಾಗಾರಕ್ಕೆ ಸಮಾಜ ಸೇವಕ ಸೂರಿ ಶೆಟ್ಟಿಯವರು ಸಾಗಿಸಿದರು.
ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯಲಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.