ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕರೋನಾ ವಾರಿಯರ್ಸ್ಗಳನ್ನು ಟೀಕಿಸುವ ಮೊದಲು ಅವರ ಸೇವೆಯ ಬಗ್ಗೆ ಕೃತಜ್ಞತೆಯಿರಲಿ

Posted On: 26-08-2020 11:18PM

ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಚರ್ಚೆಯಲ್ಲಿ ಇರುವುದು "ಕೊರೊನಾ ದಂದೆ" ಎಂಬ ಒಂದು ಪದ ಈ ಪದವನ್ನ ಉಪಯೊಗಿಸಿಕೊಂಡು ಮನಬಂದಂತೆ ನಮ್ಮ ವೈದ್ಯರು , ವೈದ್ಯಕೀಯ ಸಿಬ್ಬಂದಿ, ಅಂಬ್ಯುಲೆನ್ಸ್ ಚಾಲಕರು ಪೊಲೀಸ್ ಅದೇ ರೀತಿ , ಜನಪ್ರತಿನಿದಿಗಳ ಮೇಲೆ ಮನಬಂದಂತೆ ಬೈಯುದನ್ನು ಕಾಣುತ್ತಿದ್ದೇವೆ ಕೆಲವರಂತು ಇದಕ್ಕೆ ಅಧಿಕಾರಿಗಳೇ ಕಾರಣ ಎಂದು ಹೇಳಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಹೊರಿಸಿ ಅವರನ್ನು ಬಲಿಪಶು ಮಾಡುವ ಷಡ್ಯಂತ್ರ ನಡೆಯುತ್ತಿರುವುದು ಖಂಡನೀಯ. ಟೀಕೆ ಟಿಪ್ಪಣಿ ಮಾಡುವುದು ಸುಲಭ ಆದರೆ ಆ ಕೆಲಸ ಮಾಡಿದಾಗ ಮಾತ್ರ ಅದರ ನೈಜತೆ ತಿಳಿಯಲು ಸಾಧ್ಯ ಅಲ್ಲವೆ?

ಕೊರೊನಾ ದಿಂದ ಪ್ರಜೆಗಳನ್ನ ರಕ್ಷಣೆ ಮಾಡಲು ಕೊರೊನಾ ಉಡುಪಿಗೆ ಕಾಲಿಟ್ಟ ದಿನದಿಂದ ಇಲ್ಲಿಯವರೆಗೆ ರಾತ್ರಿ ಹಗಲೆನ್ನದೆ ತನ್ನ ಪ್ರಾಣವನ್ನ ಒತ್ತೆಯಾಗಿಟ್ಟು ತನ್ನ ಕುಟುಂಬದ ಬಗ್ಗೆ ಚಿಂತನೆ ಮಾಡದೆ ರೋಗಿಗಳ ಬಗ್ಗೆ ವಿಶೇಷ ಆಸಕ್ತಿ ವಹಿಸಿ ಸೇವೆ ಸಲ್ಲಿಸುತ್ತಿರುವ ಕೊರೊನಾ...ಚಿಕಿತ್ಸೆ ನೀಡುತ್ತಿರುವ ಪ್ರಾಮಾಣಿಕ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳು, ಅಧಿಕಾರಿಗಳು ಸೇರಿದಂತೆ ಆಯಾಗಳು , ಅಂಬ್ಯುಲೆನ್ಸ್ ಚಾಲಕರು ಇವರ ಈ ಒಂದು ನಿಸ್ವಾರ್ಥ ಸೇವೆಗೆ ಬೆಲೆ ಇಲ್ಲದಂತೆ ಮಾಡುತ್ತಿರುವ ಈ ರೀತಿಯ ಮನಸ್ಥಿತಿಯ ಜನರಿಗೆ ಏನು ಹೇಳುವುದು. ವೈದ್ಯರು ಸಿಬಂದಿಗಳು ಜನರ ಈ ಟೀಕೆಗಳಿಗೆ ಬೇಸತ್ತು ತನ್ನ ಕರ್ತವ್ಯದಿಂದ ಹಿಂದೆ ಸರಿದರೆ ಆಗುವ ಪರಿಣಾಮದ ಬಗ್ಗೆ ಅರಿವಿದೆಯೇ ?ಆಗ ಎನು ಗತಿ? ಇದರ ಬಗ್ಗೆ ಯಾಕೆ ಜನರು ಚಿಂತನೆ ಮಾಡುತ್ತಾ ಇಲ್ಲ ?ಎಂಬ ಬೇಸರವಿದೆ.

ಆಸ್ಪತ್ರೆ ಅಥವಾ ವೈದ್ಯರು ಅದೇ ರೀತಿ ವೈದ್ಯಕೀಯ ಸಿಬ್ಬoದಿಗಳು ಮಾಡಿದ ಒಂದು ತಪ್ಪನ್ನು ದೊಡ್ಡ ರೀತಿಯಲ್ಲಿ ಪ್ರಚಾರ ಮಾಡಿ ಅವರ ಬಗ್ಗೆ ಟೀಕೆ ಮಾಡುವ ಮೂಲಕ ಅವರ ಮಾನಸಿಕ ಸ್ಥಯ೯ ಕಡಿಮೆ ಮಾಡುತ್ತಿರುವ ಈ ರೀತಿ ಮನಸ್ಸಿನ ಜನರು ಅವರ ಒಳ್ಳೆಯ ಕೆಲಸವನ್ನು ಒಂದು ಬಾರಿಯೂ ಪ್ರಶಂಸಿಸುವ ಕಾಯ೯ ಮಾಡದಿರುವುದು ಸರಿಯೇ ? ಕೊರೊನಾದಿಂದ ಸತ್ತ ವ್ಯಕ್ತಿಗಳ ದೇಹವನ್ನ ಸ್ವಂತ ಕುಟುಂಬಿಕರೆ ಮುಟ್ಟಲು ತಯಾರಿಲ್ಲದ ಈ ಸಮಯದಲ್ಲಿ ನಮ್ಮ ವೈದ್ಯಕೀಯ ಸಿಬ್ಬಂದಿಗಳು ಇದುವರೆಗೆ 70 ಕ್ಕಿಂತ ಹೆಚ್ಚು ಮಂದಿ ಕೊರೊನಾ ದಿಂದ ಮೃತ ವ್ಯಕ್ತಿಗಳ ದೇಹಗಳನ್ನು ಅವರವರ ಸಂಬಂದಿಕರಿಗೆ ತಾವೇ ಖುದ್ದಾಗಿ ಅವರ ಅಂತಿಮ ವಿಧಿ ವಿದಾನಗಳನ್ನ ಮಾಡಲು ಸಹಕರಿಸಿದ್ದಾರೆ.ಈ ಬಗ್ಗೆ ಜನರು ಮಾತನಾಡುದಿಲ್ಲ. ಕೇವಲ ತಪ್ಪುಗಳನ್ನು ವೈಭವಿಕರಿಸದೆ ಅವರ ಉತ್ತಮ ಮಾನವೀಯ ಕಾಯ೯ ದ ಬಗ್ಗೆ ಕೂಡ ವೈಭವೀಕರಣ ಮಾಡಬೇಕಾಗಿದೆ. ಅಂದ ಮಾತ್ರಕ್ಕೆ ಅಸ್ಪತ್ರೆಯವರು ಅಧಿಕಾರಿಗಳು ತಪ್ಪೆ ಮಾಡುದಿಲ್ಲ ಎಂದು ಹೇಳಿದರೆ ತಪ್ಪಾಗಬಹುದು ಒತ್ತಡದಲ್ಲಿ ಕೆಲಸ ನಿವ೯ಹಿಸುವಾಗ ಅರಿವಿಗೆ ಬಾರದೆ ತಪ್ಪಾಗಬಹುದು ಅದನ್ನು ಅವರಿಗೆ ಮನದಟ್ಟು ಮಾಡಿ ಮುಂದೆ ತಪ್ಪಾಗದಂತೆ ಮನವರಿಕೆ ಮಾಡಬೇಕು. ನಾವೆಲ್ಲರೂ ಕರೋನಾ ವಾರಿಯರ್ಸ್ ಗಳ ಬಗ್ಗೆ ಸಹನುಭೂತಿ ತೋರಿಸಬೇಕು. ಇತ್ತಿಚಿಗೆ ಕರೋನಾ ಸೈನಿಕರಿಗೆ ಗೌರವಾಪ೯ಣಿ ಸಂದಭ೯ ಕರೋನಾ ಲ್ಯಾಬ್ ಸಿಬ್ಬಂದಿ ಹೇಳಿದ ಮಾತು ಮನಮಿಡಿಯುವಂತೆ ಮಾಡಿತ್ತು "ನಾವು ಬೆಳಿಗ್ಗೆ 9 ರಿಂದ ಸಂಜೆ 7 ರವರೆಗೆ ಸತತವಾಗಿ ಪಿ.ಪಿ ಕಿಟ್ ಧರಿಸಿ ಕೆಲಸ ಮಾಡುತ್ತೆವೆ ಮನೆಯಲ್ಲಿರುವ ಮಕ್ಕಳು ಮತ್ತು ಹಿರಿಯರಿಗೆ ತೊಂದರೆಯಾಗದಿರಲಿ ಎಂಬ ಕಾರಣಕ್ಕೆ ಬೇರೆ ರೂಂ ಮಾಡಿ ವಾಸ ಮಾಡುತ್ತೆನೆ ಒತ್ತಡದಲ್ಲಿ ಕಾಯ೯ ನಿವ೯ಹಣೆಯಲ್ಲಿ ಕೆಲವೊಮ್ಮೆ ಊಟ ಉಪಹಾರವನ್ನು ಬಿಟ್ಟ ಪ್ರಸಂಗ ಕೂಡ ಇದೆ" ಅವರ ಈ ಮಾತೇ ಸಾಕು ಅವರ ಸೇವಾ ತತ್ಪರತೆ ತಿಳಿಯಲು. ಸಕಾ೯ರ ದಿಂದ ಪ್ರಮುಖವಾಗಿ ಆಗಬೇಕಾದ ನಿಧಾ೯ರ : ಮುಖ್ಯವಾಗಿ ಸಕಾ೯ರ ಸೋ೦ಕಿತರ ಮನೆ ಸೀಲ್ಡೌನ್ ಮತ್ತು ಮನೆಗೆ ನೋಟಿಸ್ ಅಂಟಿಸುವ ಸಂಪ್ರದಾಯವನ್ನು ಬದಲಾವಣೆ ಮಾಡಬೇಕಾದ ಅಗತ್ಯಯಿದೆ. ವೈದ್ಯ ಸಲಹೆಗಾರರು ಕೂಡ ಇದೇ ಸಲಹೆಯನ್ನು ಸಕಾ೯ರಕ್ಕೆ ನೀಡಿದೆ. ಕಾರಣ ಮನೆ ಸೀಲ್ ಡೌನ್ ನಿ೦ದ ಬೇರೆ ಜನರು ಇವರನ್ನು ನೋಡುವ ದೃಷ್ಟಿಯೇ ಬೇರೆ ಅವರನ್ನು ಭಯೋತ್ಪಾದಕರಂತೆ ಕಾಣುವಾಗ ಮನಸ್ಸಿಗೆ ಆಗುವ ನೋವು ಅವರಿಗೇ ಗೊತ್ತು ಅದೇ ರೀತಿ ದಿನಾಲೂ ಬಂದು ಸೋಂಕಿತ ಕುಟುಂಬದ ಭಾವಚಿತ್ರ ತೆಗೆಯುವಾಗ ಇತರೆ ಜನರು ಇಲ್ಲ ಸಲ್ಲದ ಮಾತು ಕೇಳುವಾಗ ಆಗುವ ಮಾನ ಆಘಾತದಿಂದ ತಪ್ಪಿಸಿಕೊಳ್ಳಲು ಜನರು ಸ್ವಪ್ರೇರಿತರಾಗಿ ಪರೀಕ್ಷೆ ಮಾಡಲು ಮುಂದೆ ಬರುತ್ತಿಲ್ಲ ಅವರಿಗೆ ಕರೋನಾ ಕ್ಕಿoತ ಸೀಲ್ಡೌನ್ ಭಯವೇ ಹೆಚ್ಚು. ಹೀಗಾಗಿ ಅವರಿಗೆ ಮನವರಿಕೆ ಮಾಡಿ ಮನೆಯಿಂದ ಹೊರಬರದಂತೆ ನೋಡಬೇಕೆ ಹೊರತು ಈ ರೀತಿಯ ಆಚರಣೆಯಿಂದ ಮುಕ್ತಗೊಳಿಸಬೇಕು.ಅಧಿಕಾರಿಗಳಿಗೆ ಕರೋನಾ ಪರೀಕ್ಷೆ ಟಾಗೆ೯ಟ್ ಕೊಡದಿರುವುದು ಒಳಿತು.ವೈದ್ಯರು ಮುಖ್ಯವಾಗಿ ಕ್ಲಿನಿಕ್ ನಲ್ಲಿ ಪ್ರಾಕ್ಟಿಸ್ ಮಾಡುವವರಿಗೆ ಫಿವರ್ ಟೆಸ್ಟ್ ಮಾಡಲು ಅವಕಾಶ ನೀಡಿದರೆ ಉತ್ತಮ ಹಾಗೂ ಅವರಿಗೆ ಯಾವುದೇ ಒತ್ತಡವಿಲ್ಲದೆ ಸೇವೆ ಸಲ್ಲಿಸಲು ಅವಕಾಶ ನೀಡಿದರೆ ಮಾತ್ರ ಇತರೆ ರೋಗಗಳಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತದೆ. ಇಲ್ಲವಾದಲ್ಲಿ ಕರೋನಾಕ್ಕಿಂತ ಹೆಚ್ಚು ಜನರು ಸರಿಯಾಗಿ ಚಿಕಿತ್ಸೆ ಸಿಗದೆ ಸಾಯಬಹುದು. ಹೀಗೆ ಸಕಾ೯ರ ಸ್ಪಷ್ಟವಾದ ನಿಧಾ೯ರ ಕೈಗೊಳ್ಳಬೇಕಾಗಿದೆ.

ಯಾವುದೇ ಕಾರಣಕ್ಕೆ ಆಸ್ಪತ್ರೆ ಅಥವಾ ವೈದ್ಯರ ಹೆಸರನ್ನು ಕೆಡಿಸುವ ಭರದಲ್ಲಿ ನಮ್ಮತನವನ್ನು ಮರೆಯದಿರೋಣ. ಕೊನೆಯದಾಗಿ ಕೊರೊನಾ ದಂದೆಕೊರರಿಗೆ ಬೈಯ್ಯವ ಬರದಲ್ಲಿ ನೈಜ ಕೊರೊನಾ ವಾರಿಯರ್ಸ್‌ ಬೆಸರಿಸದೇ ಇರೋಣ ಅವರ ಆತ್ಮಸ್ಥೈರ್ಯ ಕುಗ್ಗಿಸುವ ಕಾಯ೯ ಬೇಡ, ಸರಕಾರಿ ಆಸ್ಪತ್ರೆಗಳಲ್ಲಿ ಕಳೆದ 3-4 ತಿಂಗಳುಗಳಿಂದ ಒಂದೇ ಒಂದು ದಿನದ ರಜೆ ಪಡೆಯದೆ ನಮಗಾಗಿ ಸೇವೆ ನೀಡುತ್ತಿರುವ ಅದೆಷ್ಟೋ ವೈದ್ಯರುಗಳಿಗೆ ಇತರ ವೈದ್ಯಕೀಯ ಸಿಬಂದಿ ಅಂಬ್ಯುಲೆನ್ಸ್ ಚಾಲಕರಿಗೆ ಹೆಚ್ಚಿನ ಗೌರವವನ್ನ ನೀಡಿ ಅವರ ಆತ್ಮಸ್ಥೈರ್ಯ ವನ್ನು ಹೆಚ್ಚಿಸೋಣ.. ಆದಷ್ಟು ಬೇಗ ಕರೋನಾ ದೂರವಾಗಲಿ. ರಾಘವೇಂದ್ರ ಪ್ರಭು, ಕವಾ೯ಲು ಯುವ ಲೇಖಕ