ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ಶ್ರೀ ವಿಘ್ನೇಶ್ವರ ಪ್ರಿಂಟರ್ಸ್ ಮತ್ತು ಹತ್ತನೇ ತರಗತಿ (1986.87 ) ವಿದ್ಯಾರ್ಥಿ ಗಳು ಸರಕಾರಿ ಪ. ಪೂ. ಕಾಲೇಜ್ ಫಿಶರೀಸ್ ಮಲ್ಪೆ ಇವರ ವತಿಯಿಂದ ಗುರುವಂದನಾ ಕಾರ್ಯಕ್ರಮದಲ್ಲಿ ವಿದ್ಯೆ ಕಲಿಸಿದ ಗುರುಗಳಾದ ಲೀಲಾ ಟೀಚರ್ ಮತ್ತು ಭಾಸ್ಕರ್ ಶೆಟ್ಟಿಯವರನ್ನು ಗೌರವಿಸಲಾಯಿತು.
ಕಾರ್ಯಕ್ರಮ ದಲ್ಲಿ ವಿಘ್ನೇಶ್ವರ ಪ್ರಿಂಟರ್ಸ್ ಮಾಲಕ ಎಮ್ ಮಹೇಶ್ ಕುಮಾರ್, ಉದ್ಯಮಿ ಚಿತ್ರ ಕುಮಾರ್, ಸಿವಿಲ್ ಇಂಜಿನಿಯರ್ ಜಯರಾಮ್, ಉದ್ಯಮಿ ಲಕ್ಷ್ಮೀಶ್ ಬಂಗೇರ, ಉದ್ಯಮಿ ಸುಧಾಕರ್,
ಜಿಲ್ಲಾ ಪಂಚಾಯತ್ ಉದ್ಯೋಗಿ ರೋಹಿಣಿ, ಉದ್ಯಮಿ ವಸಂತಿ
ಉಪಸ್ಥಿತರಿದ್ದರು ಗುರು ಗಳ ಸ್ವಗೃಹ ಕ್ಕೆ ಹೋಗಿ ಗುರುವಂದನೆ ಮಾಡಿರುವುದು ನಮ್ಮೆಲ್ಲರ ಭಾಗ್ಯ ಎಂದು ಸದಸ್ಯರು ಸಂತೋಷ ವ್ಯಕ್ತಪಡಿಸಿದರು, ಅದೇ ರೀತಿ ಭಾಸ್ಕರ್ ಶೆಟ್ಟಿ ಹಾಗೂ ಲೀಲಾವತಿ ಟೀಚರ್ ದಂಪತಿಗಳು ವಿದ್ಯಾರ್ಥಿಗಳಿಗೆ ಆಶೀರ್ವಾದ ನೀಡಿದರು.