ಇಚ್ಚಾಶಕ್ತಿಯ ರಾಜಕೀಯ ನಿಲುವುಗಳಲ್ಲಿ ಮಾತ್ರ ಇಂತಹದ್ದು ಸಾಧ್ಯ. ವೈ.ಎಸ್.ಜಗನ್‌ಮೋಹನ್ ರೆಡ್ಡಿ ಯವರನ್ನು ಅಭಿನಂದಿಸೋಣ. ಈ ದೇಶದಲ್ಲಿಯೆ ಅವಿಸ್ಮರಣೀಯವಾಗುಳಿಯುವಂತೆ ಕಳೆದ ಸಾಲಿನಲ್ಲಿ ಐವತ್ತು ಸಾವಿರದಷ್ಟು ಸಮಸ್ತ ಸಮಾಜಬಾಂಧವರು ಏಕ ಉದ್ದೇಶದಿಂದ ಒಗ್ಗೂಡಿ "ಬಿಲ್ಲವ ಮಹಾ ಸಮಾವೇಶ" ದಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಎನ್ನುವ ಪರಿಕಲ್ಪನೆಯ ಮನವಿಯನ್ನು ಪ್ರಪ್ರಥಮ ಬಾರಿ ನೀಡಲಾಗಿತ್ತು.ಈವರೆಗೆ ಬೇರೆ ಬೇರೆ ಸಮಾಜಕ್ಕೆ ಅಭಿವೃದ್ಧಿ ನಿಗಮಗಳನ್ನು ಸ್ಥಾಪಿಸಲಾಗಿದೆ.ಇದಕ್ಕೆ ವಿರೋಧವಲ್ಲ ಮತ್ತು ಸಂತಸವೆ.ಆದರೆ ಈ ಸಮಾವೇಶದ ಪ್ರಭಾವದಿಂದಾಗಿ ಆಂಧ್ರಪ್ರದೇಶ ಸರ್ಕಾರ ಸೂಕ್ತ ನಿರ್ಧಾರ ಕೈಗೊಂಡಿರುವುದನ್ನು ಮೆಚ್ಚುವಂತದ್ದು. ಹಿಂದುಳಿದ ಸಮುದಾಯವಾಗಿ ರಾಜ್ಯಾದ್ಯಂತ ಬಹಳ ದೊಡ್ಡ ಸಂಖ್ಯೆಯಲ್ಲಿದ್ದು ರಾಜಕೀಯ ನಿರ್ಣಾಯಕರಾಗಿರುವ ನಾವು ಪ್ರತಿ ಭಾರಿಯೂ ಮನವಿ ಮತ್ತು ಆಶ್ವಾಸನೆಗಷ್ಟೆ ಸೀಮಿತರಾಗುತ್ತಿದ್ದೇವೆ. ಸಂಘಟನಾತ್ಮಕ ಭೇದ ಭಾವಗಳನ್ನು ಮರೆತು ಸಮಾಜಕ್ಕೋಸ್ಕರ ನೀಡಿರುವ ಮನವಿಯನ್ನು ಪಕ್ಷಭೇದವಿಲ್ಲದೆ ಸರ್ಕಾರಗಳು ಪರಿಗಣಿಸುವುದು ಅತ್ಯಂತ ಅಗತ್ಯ. ಇನ್ನಾದರೂ ಬೃಹತ್ ಬಿಲ್ಲವ ಸಮುದಾಯಕ್ಕಾಗುತ್ತಿರುವ ಅನ್ಯಾಯ ,ಅವಮಾನವನ್ನು ಖಂಡಿಸುತ್ತಾ ಕರ್ನಾಟಕ ಘನ ಸರ್ಕಾರವು ಪಕ್ಷಾತೀತವಾಗಿ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ದಿಟ್ಟ ಕ್ರಮ ಕೈಗೊಳ್ಳುವಂತಾಗಲಿ.
ಪ್ರವೀಣ್ ಪೂಜಾರಿ, ಜಿಲ್ಲಾಧ್ಯಕ್ಷರು, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ(ರಿ.)ಉಡುಪಿ