ಬಂಟಕಲ್ಲು ಶರ್ಮರ ತೋಟದಲ್ಲಿ ಸಮಗ್ರ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷತೆ
Posted On:
29-09-2020 01:59AM
ವೈಜ್ಞಾನಿಕ ಕೃಷಿ ಪದ್ದತಿಯಿಂದ ಯಶಸ್ವಿ ಕೃಷಿ ಮಾಹಿತಿ ಕಾರ್ಯಕ್ರಮದಲ್ಲಿ ಶ್ರೀ ರಾಮಕೃಷ್ಣ ಶರ್ಮ.
ಪ್ರಸ್ತುತ ದಿನಗಳಲ್ಲಿ ಕೃಷಿಕರು ವೈಜ್ಞಾನಿಕ ಕೃಷಿ ಪದ್ದತಿಯನ್ನು ಅಳವಡಿಸುವುದರಿಂದ ಕೃಷಿಯಲ್ಲಿ ಯಶಸ್ಸನ್ನು ಪಡೆಯಲು ಸಾಧ್ಯ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ಶ್ರೀ ರಾಮಕೃಷ್ಣ ಶರ್ಮರವರು ತಿಳಿಸಿದರು. ಬಂಟಕಲ್ಲು ನಾಗರೀಕ ಸೇವಾ ಸಮಿತಿ(ರಿ) ಆಶ್ರಯದಲ್ಲಿ ಇಂದು ಬಂಟಕಲ್ಲು ಶರ್ಮರವರ ಕೃಷಿ ತೋಟದಲ್ಲಿ ನಡೆದ ಸಮಗ್ರ ಕೃಷಿ ಮಾಹಿತಿ ಮತ್ತು ಪ್ರಾತ್ಯಕ್ಷತೆ ಕಾರ್ಯಕ್ರಮದಲ್ಲಿ ಕೃಷಿ ಮಾಹಿತಿ ನೀಡಿ ಮಾತನಾಡುತಿದ್ದರು. ಮಲ್ಲಿಗೆ ಕೃಷಿ, ತೆಂಗು, ಕಂಗು ಕೃಷಿಯ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ನಾ.ಸೇ ಸಮಿತಿಯ ಅಧ್ಯಕ್ಷ ಶ್ರೀ ಕೆ.ಆರ್ ಪಾಟ್ಕರ್ ರವರು ಮಲ್ಲಿಗೆ ಕೃಷಿಕರಾದ ಶ್ರೀಮತಿ ಅನಿತಾ ಮೆಂಡೋನ್ಸಾರವರಿಗೆ ಮಲ್ಲಿಗೆ ಗಿಡವನ್ನು ನೀಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಾಗರಿಕ ಸೇವಾ ಸಮಿತಿಯ ಧೇಯ ಉದ್ದೇಶಗಳ ಬಗ್ಗೆ ತಿಳಿಸಿ ತುರ್ತು ಸಂಧರ್ಭದಲ್ಲಿ ಸಮಿತಿಯು ಅಂಬುಲೆನ್ಸ್ ಉಚಿತ ಸೇವೆಯ ಬಗ್ಗೆ ಮಾಹಿತಿ ನೀಡಿ ಕೃಷಿಕರ ಸಹಾಯಕ್ಕೆ ನಾಗರಿಕ ಸಮಿತಿಯು ಸದಾ ಸಿದ್ದವಿದೆ ಎಂದು ತಿಳಿಸಿದರು. ನಿವೃತ್ತ ಶಿಕ್ಷಕ ಬಂಟಕಲ್ಲು ಶ್ರೀ ರಮಾನಾಥ ಪಾಟ್ಕರ್ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಅನೇಕ ಕೃಷಿಕ ಭಾಂಧವರು , ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಉಡುಪಿಯ ಈಸೀ ಲೈಫ್ ನವರು ಅಡಿಕೆ ಮರ ಹತ್ತುವ ಟ್ರೀ ಬೈಕ್ ನ ಪ್ರಾತ್ಯಕ್ಷತೆ ನೀಡಿದರು. ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪುಂಡಲೀಕ ಮರಾಠೆ, ಸಮಿತಿಯ ಸದಸ್ಯರು, ಬಂಟಕಲ್ಲು ದೇವಸ್ಥಾನದ ಆಡಳಿತ ಮಂಡಳಿಯ ಆಡಳಿತೆ ಮೊಕ್ತೇಸರರಾದ ಶ್ರೀ ಶಶಿಧರ ವಾಗ್ಲೆ, ಕೃಷಿಕರಾದ ಶ್ರೀ ಸುಂದರ ಪಾಟ್ಕರ್, ಶಿವರಾಮ ಕಾಮತ್ , ಆಲ್ಬರ್ಟ್ ಕಸ್ತಲೀನೊ,ಫೆಲಿಕ್ಸ್ ಡಯಾಸ್, ಆಲ್ಬರ್ಟ್ ಡಿ'ಸೋಜ , ರವೀಂದ್ರ ಕುಲಾಲ್ ಮುಂತಾದವರು ಭಾಗವಹಿಸಿದ್ದರು. ನಾ.ಸೇ ಸಮಿತಿಯ ಕಾರ್ಯದರ್ಶಿ ಶ್ರೀ ದಿನೇಶ್ ದೇವಾಡಿಗರವರು ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ವರದಿ : ಕೆ. ಆರ್. ಪಾಟ್ಕರ್ ಬಂಟಕಲ್ಲು