ನಮ್ಮ ಕಾಪು ನ್ಯೂಸ್ :- ಕಾಪು ಕ್ಷೇತ್ರದ ಹಾಗೂ ಸುತ್ತಮುತ್ತಲಿನ ಪ್ರದೇಶದ ಸುದ್ದಿಯನ್ನು ಮತ್ತು ಜಾಹಿರಾತನ್ನು ಪ್ರಕಟಿಸಲು ಸಂಪರ್ಕಿಸಿ : +91 932 658 3640

Namma Kaup News

ಕಾಲಾವಧಿ ಆಟಿ ಮಾರಿಪೂಜೆ : ಹರಕೆ ಕೋಳಿ ಸಮರ್ಪಣೆ ಕುರಿತು ಸ್ಪಷ್ಟೀಕರಣ

Posted On: 28-07-2025 07:30PM

ಕಾಪು : ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ 2025ರ ಜುಲೈ 29 ಮತ್ತು 30ರಂದು ನಡೆಯಲಿರುವ ಕಾಲಾವಧಿ ಆಟಿ ಮಾರಿಪೂಜೆಯಲ್ಲಿ ಹರಕೆ ಕೋಳಿ ಸಮರ್ಪಿಸುವ ಬಗ್ಗೆ ಭಕ್ತರಿಗೆ ಸಾಮಾಜಿಕ ಜಾಲತಾಣದಲ್ಲಿ ಗೊಂದಲ ಏರ್ಪಟ್ಟಿದ್ದು, ಈ ಹಿಂದೆ ತಾಯಿ ಮಾರಿಯಮ್ಮನಿಂದ ಊರಿನ ಕೋಳಿ ಹರಕೆಯಾಗಿ ಸಮರ್ಪಿಸುವ ಬಗ್ಗೆ ವಾಕ್ಷ್ಯ ಆಗಿದ್ದರೂ ಸಹ ಆಟಿ ಮಾರಿಪೂಜೆಯಲ್ಲಿ ಈ ಹಿಂದಿನಂತೆಯೇ ಹರಕೆಯ ಕೋಳಿಯನ್ನು ಸಮರ್ಪಿಸಬಹುದಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ, ಅಭಿವೃದ್ಧಿ ಸಮಿತಿ ಮತ್ತು ಕಾರ್ಯನಿರ್ವಹಣಾಧಿಕಾರಿ, ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು ಇವರು ಸ್ಪಷ್ಟೀಕರಣ ನೀಡಿದ್ದಾರೆ.

ಭಕ್ತಾದಿಗಳು ಸಹಕರಿಸಬೇಕಾಗಿ ವಿನಂತಿ.