ಕುಡಿಯುವ ನೀರು ಪೋಲು ಕೇಳುವವರು ಯಾರು ಇಲ್ಲವೇ ?
Posted On:
30-09-2020 09:55PM
ಹಿರಿಯಡಕ -ಉಡುಪಿ ಮುಖ್ಯ ರಸ್ತೆಯಲ್ಲಿ (ಅಂಜಾರು ಕ್ರಾಸ್) ಸ್ಯಾಬ್ ಒಡೆದು ಕಳೆದ 10 ದಿನದಿಂದ ನಿರಂತರವಾಗಿ ಕುಡಿಯುವ ನೀರು ಚರಂಡಿ ಸೇರುತ್ತಿದೆ. ಸ್ಥಳೀಯರ ಪ್ರಕಾರ ದಿನಕ್ಕೆ ಅಂದಾಜು ಹತ್ತು ಸಾವಿರ ಲೀಟರ್ ನೀರು ಚರಂಡಿಗೆ ಹೋಗುತ್ತಿದೆ.ಈ ರಸ್ತೆಯ ಪಕ್ಕದಲ್ಲಿ ನಿರಂತರವಾಗಿ ನೀರು ಹರಿಯುತ್ತಿರುದರಿಂದ ಕೆಸರು ಉಂಟಾಗಿ ರಸ್ತೆಯಲ್ಲಿ ನಡೆದಾಡುವ ಪಾದಚಾರಿಗಳಿಗೂ ತೊಂದರೆಯಾಗಿದೆ.
ಈ ಬಾರಿ ಮಳೆ ಬಂದ ಕಾರಣ ನೀರಿನ ಸಮಸ್ಯೆ ಉಂಟಾಗಲಾರದು ಆದರೆ ಈ ರೀತಿಯಲ್ಲಿ ಶುದ್ದ ನೀರು ಪೋಲಾಗುತ್ತಿರುದನ್ನು ನೋಡಿಯೂ ಗಮನ ಹರಿಸದ ಗ್ರಾಮ ಪಂಚಾಯತ್ ನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಅತೀ ಶೀಘ್ರದಲ್ಲಿ ನೀರಿನ ಸ್ಲಾಬ್ ದುರಸ್ತಿಗೊಳಿಸಿ ಕುಡಿಯುವ ನೀರು ಹಾಳಾಗದಂತೆ ಮಾಡಬೇಕಾಗಿದೆ.
ವರದಿ : ರಾಘವೇಂದ್ರ ಪ್ರಭು ಕರ್ವಾಲು
ನಮ್ಮ ಕಾಪು ನ್ಯೂಸ್